Kannada NewsKarnataka NewsLatest

ಖತರನಾಕ್ ಐಡಿಯಾ: ಇಬ್ಬರು ಜೈಲಿಗೆ

ಪ್ರಗತಿವಾಗಿನಿ ಸುದ್ದಿ, ಬೆಳಗಾವಿ – ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಪೊಲೀಸರಾಗಲು ಯತ್ನಿಸಿದ ಇಬ್ಬರು ಇದೀಗ ಜೈಲು ಪಾಲಾಗಿದ್ದಾರೆ.
 ದಿನಾಂಕ 12.08.2021 ರಂದು 07.30 ಗಂಟೆಗೆ ಬೆಳಗಾವಿ ನಗರದ ಕೆ.ಎಸ್.ಆರ್.ಪಿ 2 ನೇ ಪಡೆ ಮಚ್ಚೆ ಮೈದಾನದಲ್ಲಿ ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾಲಕ್ಕೆ ಬಾಳೇಶ ಸನ್ನಪ್ಪ ದುರದುಂಡಿ (ಸಾ/ ಜಾಗನೂರ್ ತಾ/ಚಿಕ್ಕೋಡಿ ಜಿ/ಬೆಳಗಾವಿ) ಇವನು ತನ್ನ ಎತ್ತರ ಕಡಿಮೆ ಇದೆ ಎನ್ನುವ ಕಾರಣಕ್ಕೆ ತನ್ನ ತಲೆಯ ಮೇಲೆ ಥರ್ಮಾಕೋಲ್ 3 ತುಣುಕುಗಳು ಹಾಗೂ ಅದರ ಮೇಲೆ ಕೂದಲಿನ ವಿಗ್ ಹಾಕಿಕೊಂಡು ಬಂದು, ನೇಮಕಾತಿ ಪ್ರಾಧಿಕಾರಕ್ಕೆ ಮೋಸ ಮಾಡಲು ಪ್ರಯತ್ನಿಸಿದ್ದಾನೆ.
ಈತನ ಮೇಲೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ:106/2021 ಕಲಂ 420, 511 ಐಪಿಸಿ ನೇದ್ದಕ್ಕೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಇನ್ನೊಂದು ಪ್ರಕರಣ

 ದಿನಾಂಕ 12.08.2021, ರಂದು 08:08 ಗಂಟೆಗೆ ಬೆಳಗಾವಿ ನಗರದ ಡಿ. ಎ.ಆರ್. ಮೈದಾನದಲ್ಲಿ ನಾಗರಿಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯನ್ನು ನಡೆಸುವ ಕಾಲಕ್ಕೆ  ಉಮೇಶ್ ಎನ್ (ವಾಯಾ:28 ವರ್ಷ. ಸಾ/ಕುಲಗೋಡ ತಾ/ಮೂಡಲಗಿ ಜಿ/ಬೆಳಗಾವಿ) ಇವನು ತನ್ನ ಎತ್ತರ ಕಡಿಮೆ ಇದೆ ಎನ್ನುವ ಕಾರಣಕ್ಕೆ ತನ್ನ ತಲೆಯ ಮೇಲೆ ಪೇವಿಕೊಲ್    ತುಣುಕು ಹಾಗೂ ಅದರ ಮೇಲೆ ಕೂದಲು ಬಿಟ್ಟು ಬಂದು ನೇಮಕಾತಿ ಪ್ರಾಧಿಕಾರಕ್ಕೆ ಮೋಸ ಮಾಡಲು ಪ್ರಯತ್ನಿಸಿದ್ದು ಈ ವ್ಯಕ್ತಿಯ ಮೇಲೆ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 115/2021 ಕಲಂ:420  ಐಪಿಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button