ಮಂತ್ರಿಯಾದಾಗ ಮೊದಲು ಖುಷಿಯಾಗಿತ್ತು… ಆದರೀಗ ಕಿರಿಕಿರಿ….
ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಗೃಹ ಖಾತೆಯ ಕಿರಿಕಿರಿ ನನಗೆ ಮಾತ್ರ ಗೊತ್ತಿದೆ. ಸರಿಯಾಗಿ ನಿದ್ರೆ ಮಾಡಲೂ ಆಗದ ಸ್ಥಿತಿ ನನ್ನದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅಳಲು ತೋಡಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮೊದಲು ಆರಾಮವಾಗಿದ್ದೆ. ಈಗ ಗೃಹ ಸಚಿವ ಸ್ಥಾನ ಅಲಂಕರಿಸಿದ ಮೇಲೆ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ರಾತ್ರಿಯೆಲ್ಲ ಪೊಲೀಸರು ಮಾಹಿತಿ ನೀಡಲು ಫೋನ್ ಮಾಡುತ್ತಾರೆ.
ಹಾಗಂತ ಪಲಾಯನ ಮಾಡುವುದಿಲ್ಲ. ಕೊಟ್ಟ ಕುದುರೆಯನ್ನು ಇಳಿದರೆ ಶೂರನಾಗುವುದಿಲ್ಲ ಎಂಬ ಕಾರಣಕ್ಕೆ ಕೊಟ್ಟ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಡಿಕೆಗೆ ರಕ್ಷಾ ಕವಚದ ಅಗತ್ಯವಿದೆ. ಅಡಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೂಗುಗತ್ತಿಯಿದೆ. ಗುಣಮಟ್ಟ ಪರಿಶೀಲನೆಗೆ ಮಾನದಂಡ ನಿಗದಿ ಮಾಡಬೇಕಿದೆ. ಅಡಿಕೆ ಟಾಸ್ಕ್ ಫೋರ್ಸ್ ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥ ವಾದ ಮಂಡಿಸುವ ಮೂಲಕ ಬೆಳೆಗಾರರ ಆತಂಕ ದೂರ ಮಾಡುವ ಪ್ರಯತ್ನ ಮಾಡಲಿದೆ ಎಂದರು.
ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ