Kannada NewsLatest

ಬಸವಜ್ಯೋತಿ ಯೂಥ್ ಫೌಂಡೇಶನ್ ಪ್ರಥಮ ಶಾಖೆ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ನಿಪ್ಪಾಣಿ ತಾಲೂಕಿನ ಬಾರವಾಡ ಗ್ರಾಮದಲ್ಲಿ ಬಸವಜ್ಯೋತಿ ಯೂಥ್ ಫೌಂಡೇಶನ್ ಪ್ರಥಮ ಶಾಖೆಯನ್ನು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಬಸವಪ್ರಸಾದ ಜೊಲ್ಲೆ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಬಸವಪ್ರಸಾದ ಜೊಲ್ಲೆ, ಯುವಕರ ಏಳಿಗೆಗಾಗಿ, ಆದರ್ಶ ಸಮಾಜ ನಿರ್ಮಾಣಕ್ಕಾಗಿ ಬಸವಜ್ಯೋತಿ ಯೂಥ್ ಫೌಂಡೇಶನ್ ಸ್ಥಾಪಿಸಲಾಗಿದೆ. ಈ ಫೌಂಡೇಶನದ ಮಾಧ್ಯಮದಿಂದ ಗ್ರಾಮಿಣ ಪ್ರದೇಶದಲ್ಲಿನ ಪ್ರತಿಭೇಗೆ ಒಂದು ವೇದಿಕೆಯನ್ನು ಒದಗಿಸಲು ಯೂಥ್ ಫೌಂಡೇಶನ್ ಕಾರ್ಯಗಳು ನಡೆಯುತ್ತಿವೆ. ಇಂದಿನ ಯುವಕರೇ ನಾಳಿನ ಪ್ರಜೆಗಳು. ಈ ಧ್ಯೇಯವಾಕ್ಯ ಎಂದಿಗೂ ಪ್ರಸ್ತುತ. ಯುವಕರು ಭವಿಷ್ಯದ ನಕ್ಷತ್ರಗಳು. ಆದ್ದರಿಂದ ಈಗಿನ ಯುವಕರು ಸದೃಢ ಮತ್ತು ಧೈರ್ಯಶಾಲಿಯಾಗಿದ್ದರೆ ಮಾತ್ರ ಅವರು ಮುಂದೆ ಪರಿಪೂರ್ಣ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯ.ಈಗಿನ ಯುವ ಪೀಳಿಗೆ ದೇಶದ ಆಸ್ತಿಯಿದ್ದ ಹಾಗೆ. ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಅಪರಿಮಿತ ಪ್ರಯತ್ನದಿಂದ ಭಾರತ ಬಲಶಾಲಿ ರಾಷ್ಟçವಾಗಬಹುದು. ಯುವಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಬೇಕು ಮತ್ತುಜಗತ್ತಿಗೆ ಭಾರತದ ಶಕ್ತಿ, ಸಾಮರ್ಥ್ಯವನ್ನು ತೋರಿಸಬೇಕು ಎಂದು ಹೆಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಪವನ ಪಾಟೀಲ, ರಾಜು ಭದ್ರಗಡೆ, ಕಾರ್ಯಕರ್ತರಾದ ಸಂಜು ದೇಸಾಯಿ, ಯಶವಂತ ಜಾಧವ, ನಜರುದ್ದಿನ ಮುಲ್ಲಾ, ಊರಿನ ಹಿರಿಯರು, ಅನೇಕ ಗಣ್ಯರು, ಗ್ರಾಮ ಪಂಚಾಯತ ಸದಸ್ಯರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button