Latest

ಡ್ರಗ್ಸ್ ಪ್ರಕರಣ; ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪತ್ನಿ ಸಹೋದರ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೊಲೀಸರನ್ನೇ ಗಾಳ ಮಾಡಿಕೊಂಡು ಡ್ರಗ್ಸ್ ಮಾರಾಟ ಮಾಡಿ ಸಿಕ್ಕಿಬಿದ್ದಿರುವ ರನ ಲಾಲ್ ವಿಚರಣೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದ್ದು, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪತ್ನಿ ಸಹೋದರ ಎಂದು ತಿಳಿದುಬಂದಿದೆ.

ರಾಜಸ್ಥಾನ ಮೂಲದ ರತನ್ ಲಾಲ್, ಮಾಜಿ ಸಚಿವ ಯೋಗೇಶ್ವರ್ ಪತ್ನಿ ಸಹೋದರ ಎಂಬುದು ವಿಚಾರಣೆ ವೇಳೆ ಬಯಲಾಗಿದೆ. ಆದರೆ ಈ ಪ್ರಕರಣಕ್ಕೂ ಮಾಜಿ ಸಚಿವ ಯೋಗೇಶ್ವರ್ ಹಾಗೂ ಪತ್ನಿಗೂ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ.

Home add -Advt

ಆರೋಪಿ ರತನ್ ತನ್ನ ಡ್ರಗ್ ಮಾಫಿಯಾಗೆ ಪೊಲೀಸರನ್ನೇ ಗಾಳ ಮಾಡಿಕೊಂದಿದ್ದ. ತನ್ನ ಮೇಲೆ ಅನುಮಾನ ಬರಬಾರದು ಎಂಬ ಕಾರಣಕ್ಕೆ ಪೊಲಿಸರಿಗೆ ಮಾಹಿತಿದಾರನಾಗಿ ಕೆಲಸ ಮಾಡಿಕೊಂಡಿದ್ದ. ಗಾಂಜಾ, ಅಫೀಮು, ಆಂಧ್ರಪ್ರದೇಶದ ವೈಜಾಗ್ ನಲ್ಲಿ ಖರೀದಿಸುತ್ತಿದ್ದ. ಅಲ್ಲದೇ ಆಂಧ್ರ ಹಾಗೂ ಓಡಿಸ್ಸಾ ಗಡಿಗಳಲ್ಲಿ ನಕ್ಸಲರ ಸಂಪರ್ಕಿತರಿಂದ ಗಾಂಜಾ ಖರೀದಿ ಮಾಡುತ್ತಿದ್ದ. ರಾಜಸ್ಥಾನ ಮೂಲದ ಪೆಡ್ಲರ್ ಗಳಿಂದ ನಾನ್ ಸಿಂಥಟಿಕ್ ಡ್ರಗ್ಸ್ ಖರಿದಿಸುತ್ತಿದ್ದ ಎನ್ನಲಾಗಿದೆ.

ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ

Related Articles

Back to top button