Latest

ವಕ್ಫ್ ಆಸ್ತಿ ಕಬಳಿಕೆ ವಿರುದ್ಧದ ಹೋರಾಟಕ್ಕೆ ಸುಪ್ರೀಂಕೋರ್ಟ್ ನಲ್ಲಿ ಜಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
 ವಕ್ಫ್ ಆಸ್ತಿ ಕಬಳಿಕೆ ವಿರುದ್ಧದ ಹೋರಾಟಕ್ಕೆ ಸುಪ್ರೀಂಕೋರ್ಟ್ ನಲ್ಲಿ ಜಯ ಸಿಕ್ಕಿದ್ದು, ಸರ್ಕಾರ ನಮ್ಮ ವರದಿಯಲ್ಲಿ ಸ್ಪಷ್ಟಪಡಿಸಿರುವಂತೆ ಒತ್ತುವರಿಯಾಗಿರುವ ಎಲ್ಲ ವಕ್ಫ್ ಆಸ್ತಿಗಳನ್ನು ಮರುವಶ ಮಾಡಿಕೊಳ್ಳಲೇ ಬೇಕಾಗಿದೆ ಎಂದು ಬಿಜೆಪಿ ರಾಜ್ಯ ಸಹವಕ್ತಾರ ಅನ್ವರ್ ಮಾಣಿಪ್ಪಾಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಣಿಪ್ಪಾಡಿ, ಬಿಜೆಪಿ ರಾಜ್ಯ ವಕ್ತಾರ ಗೋ.ಮಧುಸೂದನ್ ಹಾಗೂ

 ಎಸ್.ಪ್ರಕಾಶ್ ಅವರು,  ರಾಜ್ಯದಲ್ಲಿ 2.3 ಲಕ್ಷ ಕೋಟಿ ರೂ. ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಬಿಜೆಪಿ ಮುಖಂಡ ಅನ್ವರ್ ಮಣಿಪ್ಪಾಡಿ ಸಲ್ಲಿಸಿದ್ದ ವರದಿಗೆ ಸುಪ್ರೀಂಕೋರ್ಟ್ ನಲ್ಲಿ ಜಯ ದೊರೆತಿದೆ.  2013ರ ಮಾರ್ಚ್ 16ರಲ್ಲಿ ಅಂದಿನ ಬಿಜೆಪಿ ಸರ್ಕಾರ, ವಕ್ಫ್ ಹಗರಣ ವರದಿ(ಮಾಣಿಪ್ಪಾಡಿ ವರದಿ)ಗೆ ಅನುಮೋದನೆ ನೀಡಿ ಜಾರಿಗೆ ತಂದಿತ್ತು. ಹಗರಣದಲ್ಲಿ ವಂಚನೆಯಾದಷ್ಟೂ ಹಣವನ್ನು ವಸೂಲಿ ಮಾಡಲು ಕಾಯ್ದೆಯನ್ನೂ ತಂದಿತ್ತು. ಹೈಕೋರ್ಟ್ ನಲ್ಲಿ ಎರಡು ಬಾರಿ ನಮ್ಮ ಪರವಾಗಿ ತೀರ್ಪು  ಬಂದಿದೆ. ರಾಜ್ಯ ಸರ್ಕಾರ ಕೊನೆಗೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಸರ್ಕಾರದ ವಾದವನ್ನು ಮಾ.15ರಂದು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ ಎಂದರು.

ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು: ಸರ್ಕಾರ ವಜಾಕ್ಕೆ ಮನವಿ

ಭ್ರಷ್ಟ ಗುತ್ತಿಗೆದಾರರ ಮೇಲೆ ನಡೆದ ಐಟಿ ದಾಳಿಯ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಜಿ.ಪರಮೇಶ್ವರ, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಹಾಗೂ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದ ಸದಸ್ಯರುಗಳು  ಐಟಿ ಕಚೇರಿ ಮುಂದೆ ಅನುಮತಿ ಪಡೆಯದೇ ಪ್ರತಿಭಟನೆ ಮಾಡಿದ್ದು, ಮಾದರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಲ್ಲದೆ, ಕರ್ತವ್ಯ ನಿರತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ  ಬೆದರಿಕೆ ಒಡ್ಡಿದ್ದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಆರೋಪಿಸಿತು.
 ರಾಜ್ಯದ ಮುಖ್ಯಮಂತ್ರಿಗಳು ಸರ್ಕಾರದ ಅಧಿಕಾರಿಗಳ ಮೇಲೆ ಮಾನಸಿಕ ದೌರ್ಜನ್ಯ ಮಾಡಲು ಮುಂದಾಗಿದ್ದು ಇವರ ಸಂಸ್ಕೃತಿಯನ್ನು ಬಯಲು ಮಾಡಿದೆ.  ಆಡಳಿತ ಪಕ್ಷದ ನಾಯಕರುಗಳು ಬಹಿರಂಗವಾಗಿ ನಿರ್ಲಜ್ಯತನವನ್ನು ಪ್ರದರ್ಶನ ಮಾಡಿ  ಭ್ರಷ್ಟರ ಬೆನ್ನಲುಬಾಗಿ ನಿಂತಿದ್ದು  ಅತ್ಯಂತ ಖಂಡನೀಯ.  ಇವರ ಬೇಜಾವಾಬ್ದಾರಿ ವರ್ತನೆಯಿಂದ  ರಾಜ್ಯದ ಆರೂವರೆ ಕೋಟಿ ಜನತೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ, ದೇಶದ್ಯಾಂತ ಕರ್ನಾಟಕ ರಾಜ್ಯದ ಗೌರವ ಮತ್ತು  ಘನತೆಯನ್ನು ಕಳೆದಿದ್ದಾರೆ ಎಂದರು.
 ಮುಖ್ಯಮಂತ್ರಿ  ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಗುತ್ತಿಗೆದಾರರ ಮತ್ತು ಇಂಜನಿಯರ್ ಗಳ ನಡುವೆ ಇರುವ ತಮ್ಮ ಸಂಬಂಧವನ್ನು ಬಹಿರಂಗ ಪಡಿಸಬೇಕು.  ಈ ಗುತ್ತಿಗೆದಾರಿಗೆ ಕಳೆದ ಮೂರು ತಿಂಗಳಲ್ಲಿ ಎಷ್ಟು ಮೊತ್ತದ ಕಾಮಗಾರಿಗಳನ್ನು ನೀಡಿದ್ದಾರೆ?  ಈ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು  ತಂದಿದ್ದ 2 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿತ್ತು. ಆ ಅಧಿಕಾರಿಯು ಐಟಿ ದಾಳಿಯ ತರುವಾಯ ಪರಾರಿಯಾಗಿದ್ದಾರೆ.  ಅಂದು ಈ ಎಲ್ಲಾ ಮುಖಂಡರು ಆ ವಿಷಯದ ಬಗ್ಗೆ ದಿವ್ಯ ಮೌನವನ್ನು ವಹಿಸಿದ್ದರು. ಇಲ್ಲಿಯತನಕ ಈ  ಪರಾರಿಯಾದವನನ್ನು ಬಂಧಿಸಲು ಪ್ರಯತ್ನ ಮಾಡಲಿಲ್ಲ. ಈ ಇಬ್ಬಗೆಯ ನಡುವಳಿಕೆಗೆ ಯಾವ ಕಾರಣ ಎಂದು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದರು.
 ಚುನಾವಣಾ ಆಯೋಗವು ನಿನ್ನೆ ನಡೆದ ಅನುಮತಿ ಇಲ್ಲದ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿ, ಪ್ರತಿಭಟನೆ ಭಾಗವಹಿಸಿದ ಎಲ್ಲಾ ಮುಖಂಡರುಗಳ ಮೇಲೆ ಮತ್ತು ಕರ್ತವ್ಯ ನಿರತ  ಸರ್ಕಾರಿ ಅಧಿಕಾರಿಗಳ ಮೇಲೆ ಬೆದರಿಕೆ ಒಡ್ಡಿದ ಮತ್ತು ಒತ್ತಡ ಹೇರುವ ಪ್ರಯತ್ನದ  ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
ಸ್ವತಃ ಮುಖ್ಯಮಂತ್ರಿಗಳು ಬೀದಿಗೆ ಬಂದು ಕಾನೂನು ಮೀರಿ ಪ್ರತಿಭಟನೆ ನಡೆಸಿ ಕಾನೂನು ಸುವ್ಯವಸ್ಥೆಗೆ ಭಂಗ ತಂದಿರುವ ಕಾರಣ ರಾಜ್ಯಪಾಲರು ಇದನ್ನು ಗಂಭೀರವಾಗಿ ಪರಿಗಣಿಸಿ ಮಧ್ಯೆ ಪ್ರವೇಶಿಸಬೇಕು.
 ಭ್ರಷ್ಟರ ಕಾಪಾಡಲು ಪಣ ತೊಟ್ಟು ನಿಂತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿ ಮುಂದುವರಿಯಲು ಎಲ್ಲಾ ನೈತಿಕತೆಯನ್ನು ಕಳೆದುಕೊಂಡ ಕಾರಣ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿತು.
 ಮುಖ್ಯಮಂತ್ರಿ ಕುಮಾರಸ್ವಾಮಿ ಐ.ಟಿ. ದಾಳಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಭಾರತದ ಒಕ್ಕೂಟ ವ್ಯವಸ್ಥೆಯ ವಿರುದ್ಧವಾಗಿದೆ. ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದ್ದು, ಸರ್ಕಾರವನ್ನು ವಜಾಗೊಳಿಸಲು ರಾಜ್ಯಪಾಲರು ಕೇಂದ್ರ ಗೃಹಸಚಿವಾಲಯಕ್ಕೆ ಪತ್ರ ಬರೆಯಬೇಕು.
• ಭ್ರಷ್ಟರ ಪರವಾಗಿ ಬೀದಿಗಿಳಿದು ಪ್ರತಿಭಟಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾರ ಬಗ್ಗೆಯೂ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಗೋ.ಮಧುಸೂದನ್ ಹೇಳಿದರು.

ಮೋದಿ ಕಾರ್ಯಕ್ರಮ:

ಏ. 8ರಂದು ರಾಜ್ಯದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಚುನಾವಣಾ ಪ್ರಚಾರ
• ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಏ.8ರಂದು ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಂದು ಬೆಳಿಗ್ಗೆ ಮೈಸೂರಿನಲ್ಲಿ, ಸಂಜೆ ಚಿತ್ರದುರ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
• ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರು ಮಾ.31ರಂದು ಬೆಳಿಗ್ಗೆ 12 ಗಂಟೆಗೆ ಕೊಡಗಿನ ಗೋಣಿಕೊಪ್ಪಲುನಲ್ಲಿ, ಸಂಜೆ 4ಕ್ಕೆ ಕೋಲಾರದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೋಲಾರದಲ್ಲಿ ಸಂಜೆ 5ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ‘ನಾನೂ ಚೌಕಿದಾರ’ ಅಭಿಯಾನದಡಿ ದೇಶಾದ್ಯಂತ ಚೌಕಿದಾರರನ್ನುದ್ದೇಶಿಸಿ ಮಾತನಾಡುವ ಸಂವಾದದಲ್ಲಿ ಕಾರ್ಯಕ್ರಮದಲ್ಲಿ ಸ್ಮೃತಿ ಇರಾನಿ ಪಾಲ್ಗೊಳ್ಳಲಿದ್ದಾರೆಂದು ಎಸ್.ಪ್ರಕಾಶ್ ಅವರು ತಿಳಿಸಿದರು.
ಎ.ಹೆಚ್.ಆನಂದ್, ಮಾಳವಿಕಾ ಅವಿನಾಶ್,  ಎಸ್.ಹರೀಶ್, ಛಲವಾದಿ ನಾರಾಯಾಣಸ್ವಾಮಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button