Latest
6 ತಿಂಗಳ ಹಿಂದೆ ಸಾವನ್ನಪ್ಪಿದ್ದ ಮಹಿಳೆ ಹೆಸರಲ್ಲಿ ಕೋವಿಡ್ 2 ಡೋಸ್ ಲಸಿಕೆ ಯಶಸ್ವಿ; ಮೆಸೆಜ್ ನೋಡಿ ಶಾಕ್ ಆದ ಕುಟುಂಬ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: 6 ತಿಂಗಳ ಹಿಂದೆ ಮೃತಪಟ್ಟ ಮಹಿಳೆಯೊಬ್ಬರು ಇದೀಗ ಕೋವಿಡ್ ಎರಡನೇ ಡೋಸ್ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಯಿಂದ ಕುಟುಂಬ ಸದಸ್ಯರಿಗೆ ಮೆಸೇಜ್ ಬಂದಿದ್ದು, ಮೆಸೇಜ್ ನೋಡಿದ ಕುಟುಂಬಸ್ಥರು ಶಾಕ್ ಆಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಮಾಲಾ ಪಾವಟೆ 6 ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಆದರೆ ಇದೀಗ ಮಾಲಾ ಪಾವಟೆ 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಸಕ್ಷಸ್ ಪುಲ್ ಮೆಸೇಜ್ ಮನೆಯವರ ಮೊಬೈಲ್ ಗೆ ಬಂದಿದೆ. ಅಲ್ಲದೇ ಲಸಿಕೆ ಪ್ರಮಾಣ ಪತ್ರವನ್ನೂ ಕಳುಹಿಸಲಾಗಿದೆ. ಮೃತಪಟ್ಟ ಮಹಿಳೆ ಕೊರೊನಾ ಲಸಿಕೆ ಪಡೆಯಲು ಹೇಗೆ ಸಾಧ್ಯ ಎಂದು ಮನೆಯವರೆಲ್ಲಾ ದಂಗಾಗಿದ್ದಾರೆ.
ಮಾಲಾ ಪಾವಟೆ ಮೃತಪಟ್ಟು 6 ತಿಂಗಳಾಗಿದ್ದು, ಮಹಿಳೆ ಸಾವನ್ನಪ್ಪಿರುವ ಮರಣ ಪ್ರಮಾಣ ಪತ್ರ ಕೂಡ ಕುಟುಂಬಸ್ಥರ ಬಳಿ ಇದೆ. ಲಸಿಕಾರಣದಲ್ಲಿನ ಎಡವಟ್ಟಿನಿಂದಾಗಿ ತಪ್ಪು ಸಂದೇಶ ರವಾನೆಯಾಗಿದೆ.



