Kannada NewsLatest

ಪ್ರಧಾನಿ ಮೋದಿ ಹುಟ್ಟುಹಬ್ಬ; 20 ದಿನಗಳ ಕಾಲ ಸೇವಾ ಮತ್ತು ಸಮರ್ಪಣೆ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:   ಪ್ರಧಾನಿ ನರೇಂದ್ರ ಮೋದಿಜಿ ಅವರ ಜನ್ಮದಿನದ ನಿಮಿತ್ಯ ರಾಷ್ಟ್ರಾದ್ಯಂತ ಸೆ.17 ರಿಂದ ನಿರಂತರ 20 ದಿನಗಳವರೆಗೆ ಸೇವಾ ಮತ್ತು ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಂಡು ದೇಶದ ಜನತೆಯ ಸೇವೆ ಮಾಡಲು ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ಬೆಳಗಾವಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸಂಜಯ್ ಪಾಟೀಲ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಪದಾಧಿಕಾರಿಗಳ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿ, ಪ್ರಪಂಚದ ಬಲಾಢ್ಯ ರಾಷ್ಟ್ರಗಳು ಭಾರತವನ್ನು ಒಂದು ಸಂದರ್ಭದಲ್ಲಿ ಅಸಡ್ಡೆವಾಗಿ ನೋಡುತ್ತಿದ್ದಾಗ ದೇಶದ ಅಧಿಕಾರವನ್ನು ತೆಗೆದುಕೊಂಡು ಜಗತ್ತಿಗೆ ನಾಯಕನಾಗಿ ಬೆಳೆಯುತ್ತಿದ್ದಾರೆ.  ಅವರ ಜನ್ಮದಿನದ ಅಂಗವಾಗಿ ಇಪ್ಪತ್ತು ದಿನಗಳ ಕಾಲ ದೇಶಾದ್ಯಂತ ಆರೋಗ್ಯ ಶಿಬಿರ, ರಕ್ತದಾನ, ಸ್ವಚ್ಛ ಭಾರತ, ಕೋವಿಡ್ ಲಸಿಕಾ ಶಿಬಿರ, ಆಹಾರ ವಿತರಣೆ, ಹಣ್ಣು ವಿತರಣೆ ಹೀಗೆ ಅನೇಕ ತರದ ಕಾರ್ಯಗಳನ್ನು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ ಎಂದರು.

ಅಕ್ಟೋಬರ್ 7ಕ್ಕೆ 20 ವರ್ಷ ಚುನಾಯಿತ ಪ್ರತಿನಿಧಿಯಾಗಿ ಜನಸೇವೆ ಮಾಡುತ್ತಿರುವ ನರೇಂದ್ರ ಮೋದಿಯವರ ಕಾರ್ಯಕ್ಕೆ ಅಭಿನಂದನೆಗಳನ್ನು ಸಮರ್ಪಣೆ ಮಾಡಲಾಗುವುದು ಎಂದರು.

ಬೆಳಗಾವಿ ವಿಭಾಗ ಸಹ-ಪ್ರಭಾರಿಗಳಾದ ಬಸವರಾಜ್ ಯಕ್ಕಂಚಿ ಮಾತನಾಡಿ, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು 20 ದಿನಗಳ ಸೇವಾ ಮತ್ತು ಸಮರ್ಪಣ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ನಿಮಿತ್ಯ ಪ್ರತಿಯೊಬ್ಬ ಕಾರ್ಯಕರ್ತರು ಖಾದಿ ಬಟ್ಟೆಗಳನ್ನು ಖರೀದಿಸಿ ಪ್ರೋತ್ಸಾಹಕರಾಗಬೇಕು, ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ಯ ಒಂದಿಲ್ಲ ಒಂದು ಕಾರ್ಯವನ್ನು ಮಾಡಬೇಕೆಂದು ಕರೆಕೊಟ್ಟರು.

ಸಂಘಟನಾ ಪ್ರಭಾರಿ ಜಯಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಮೋಹಿತೆ ಮಾತನಾಡಿದರು. ವೇದಿಕೆ ಮೇಲೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ್ ಪಾಟೀಲ್, ಸಂದೀಪ್ ದೇಶಪಾಂಡೆ ಇದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್ ಎಸ್ ಸಿದ್ದನಗೌಡರ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ್ ಮಾದಮ್ಮನವರ, ಉಪಾಧ್ಯಕ್ಷರಾದ ಯುವರಾಜ್ ಜಾಧವ್, ರತ್ನಾ ಗೋದಿ, ಗೋವಿಂದ ಕೊಪ್ಪದ್, ಮಂಜುಳಾ ಹಿರೇಮಠ ಶಾಮಾನಂದ್ ಪೂಜಾರಿ, ವೀರಭದ್ರಯ್ಯ ಪೂಜಾರ, ಡಾ ಗುರುಪ್ರಸಾದ್ ಕೋತಿನ, ಗುರು ಮೆಟಗುಡ, ಮಡಿವಾಳಪ್ಪ ಚಳಕೊಪ್ಪ, ಮುಂತಾದ ಪದಾಧಿಕಾರಿಗಳು ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ್ ಸ್ವಾಗತಿಸಿದರು, ಸಂದೀಪ್ ದೇಶಪಾಂಡೆ ವಂದಿಸಿದರು.

ಬೆಳೆಗಾವಿಗೂ ಬಂತು ಸ್ಪುಟ್ನಿಕ್ ವ್ಯಾಕ್ಸಿನ್ !

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button