Latest

ವಿಜಯಯಾತ್ರೆ ನಿಮಿತ್ತ 28ರಂದು ಬೆಳಗಾವಿಗೆ ಶೃಂಗೇರಿ ಜಗದ್ಗುರುಗಳು

ಪ್ರಗತಿ ವಾಹಿನಿ ಬೆಳಗಾವಿ

ಸನಾತನ ಧರ್ಮ ರಕ್ಷಣೆಯ ವಿಜಯಯಾತ್ರೆಯ ಅಂಗವಾಗಿ ಶೃಂಗೇರಿ ಪೀಠಾಧಿಪತಿ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಕರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರಭಾರತಿ ಮಹಾಸ್ವಮಿಗಳು ಬುಧವಾರ ಬೆಳಗಾವಿಗೆ ಆಗಮಿಸಲಿದ್ದಾರೆ.

ಬುಧವಾರದಿಂದ ಶುಕ್ರವಾರದವರೆಗೆ ಬೆಳಗಾವಿಯಲ್ಲಿ ವಿಜಯಯಾತ್ರೆಯ ನಿಮಿತ್ತ ನಡೆಯುವ ಧಾರ್ಮಿಕ ಅನೇಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.

28 ರಂದು ಸಂಜೆ 5.30ಕ್ಕೆ ಮಂಗಳವಾದ್ಯದೊಂದಿಗೆ ಪೊರ್ಣಕುಂಭ ಸ್ವಾಗತ ಹಾಗೂ ಅನಗೊಳ ನಾಕ ಹತ್ತಿರದ ನ್ಯೊ ಉದಯ ಭುವನದಿಂದ ಸಿಟಿಹಾಲ್ ವರೆಗೆ ಶೊಭಾಯಾತ್ರೆ ನಡೆಯುವುದು. ನಂತರ ಸಿಟಿಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಧೊಳಿ ಪಾದುಕ ಪೊಜೆ, ವೇಧಘೋಷ, ಪ್ರಾರ್ಥನೆ, ಫಲಪುಷ್ಪ ಸಮರ್ಪಣೆ ಮತ್ತು ಜಗದ್ಗುರುಗಳಿಂದ ಅನುಗ್ರಹ ಭಾಷಣ ನಡೆಯಲಿದೆ. ರಾತ್ರಿ 8 ಘಂಟೆಗೆ ಶ್ರೀ ಶಾರದ ಚಂದ್ರಮೌಳೀಶ್ವರ ಪೊಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಗುರುವಾರ ಹಾಗೂ ಶುಕ್ರವಾರ ಭಾಗ್ಯ ನಗರದ ಸಿಟಿಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 8 ಘಂಟೆಗೆ ಶ್ರೀಮಠದ ಅರ್ಚಕರಿಂದ ಶಾರದಾಚಂದ್ರಮೌಳೀಶ್ವರ ಪೊಜೆ, ಬೆಳಿಗ್ಗೆ 10 ಘಂಟೆಯಿಂದ ಮಹಾಸ್ವಮಿಗಳವರ ದರ್ಶನ, ಪಾದುಕಪೊಜೆ, ಭಿಕ್ಷಾವಂದನೆ ಇತ್ಯಾದಿ ಗುರುಸೇವೆಗಳು ನಡೆಯಲಿವೆ.

ಗುರುವಾರ ಸಂಜೆ ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಗಾವಿ ಜನತೆ ಪರವಾಗಿ ಗುರುಗಳವರಿಗೆ ಅಭಿನಂದನ ಪತ್ರ, ಗುರುಕಾಣಿಕೆ ಹಾಗು ಫಲಪುಷ್ಪ ಸಮರ್ಪಣೆ, ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ ಸಮಿತಿಯಿಂದ ಉಪನ್ಯಾಸ, ಕೃತಜ್ಞತಾ ಸಮರ್ಪಣೆ ಹಾಗೂ ಗುರುಗಳಿಂದ ಆರ್ಶಿವಚನ, ಪ್ರಸಾದ ವಿತರಣೆ ನಡೆಯಲಿದೆ.

ಸನಾತನ ಧರ್ಮ ರಕ್ಷಣೆಗಾಗಿ ನಡೆಯುವ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಬೆಳಗಾವಿಯ ಎಲ್ಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಮಿತಿಯ ಕಾರ್ಯಾಧ್ಯಕ್ಷ ಎಸ್.ಎಂ ಕುಲಕರ್ಣಿ, ಅಧ್ಯಕ್ಷ ಸುರೇಂದ್ರ ಅನಗೊಳಕರ ಹಾಗೂ ಕಾರ್ಯದರ್ಶಿ ಡಾ.ಅನಿಲ ಅಂಕೊಲ ತಿಳಿಸಿದ್ದಾರೆ.

—————————

Pragati Vahini Belagavi

As part of the VijayYaatre organized by Shringeri Sharadha Mutt,  Shri. Vidushekhar  Bharati MahaSwamiji  of the Mutt will visit Belagavi  on November 28, 2018.

On November 28,  Vidushekhar Bharati Mahaswamiji will be welcomed to the city with religious procession which will commence at  Uday Bhavan,Near Anagol Naka in Tilakawadi, and the procession will culminate at City Hall, Bhagya Nagar.  At night 8 pm pooja of Sharadha Chandramouleshwar will be performed.

On 29 and 30 November morning 8 am to 10 pm various religious rituals associated with Sharadha Shringeri Peetha will be carried out at City Hall premises,  Bhagya Nagar Belagavi. On 29th November at  7 pm Swamyjis  aashirvachana speech will be  held  in Ramanath Mangala karyalay, Bhagya nagar, informed working Committee Chairman S.M. Kulkarni, President Surendra Angolkar and secretary Dr.Anil Ankola.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button