ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತ್ರಿಕೆ ಸಂಪಾದಕ ಶಂಕರ್ ಕುಟುಂಬದ ಐವರು ಸದಸ್ಯರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂಪಾದಕ ಶಂಕರ್ ತನ್ನ ಪತ್ನಿ ಭಾರತಿ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಮಕ್ಕಳ ಆತ್ಮಹತ್ಯೆಗೆ ತನ್ನ ಪತ್ನಿಯ ಪ್ರಚೋದನೆಯೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತನ್ನ ಮಗಳು ಸಿಂಚನಾ ಮಾತ್ರ ಚೆನ್ನಾಗಿರಬೇಕು, ಅಳಿಯ ಏನಾದರೂ ಆಗಲಿ ಎಂದು ಹೇಳುತ್ತಿದ್ದಳು. ಮಗಳು ತನ್ನ ಗಂಡನ ಕುಟುಂಬದವರ ಜೊತೆ ಹೊಂದಿಕೊಂಡಿರಲಿಲ್ಲ. ಬೇರೆ ಮನೆ ಮಾಡುವಂತೆ ಹೇಳುತ್ತಿದ್ದಳು. ಇದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ದೂರಿದ್ದಾರೆ.
ಈ ಹಿಂದೆ ಮಗಳು ಸಿಂಚನಾ ತನ್ನ ಗಂಡನನ್ನು ಹೆದರಿಸಲು ಕೈ ಕುಯ್ದುಕೊಂಡಿದ್ದಳು. ನಾನು ಬುದ್ಧಿವಾದ ಹೇಳಿದ್ದಕ್ಕೆ ನನ್ನ ಪತ್ನಿ ಭಾರತಿ, ಅಳಿಯನ ಪರವಾಗಿ ಮಾತನಾಡುತ್ತೀಯಾ ಎಂದು ನನ್ನನ್ನು ಬಾಯಿಗೆ ಬಂದಂತೆ ಬೈದಿದ್ದಳು. ಇನೋರ್ವ ಮಗಳು ಸಿಂಧೂರಾಣಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಗ ನನ್ನ ಪತ್ನಿಯೇ ಶಾಕ್ ಆಗಿದ್ದಳು. ಸಾಯೋದಾದರೆ ಎಲ್ಲರೂ ಒಟ್ಟಿಗೆ ಸಾಯೋಣ ಎನ್ನುತ್ತಿದ್ದಳು. ಇಡೀ ಕುಟುಂಬದ ಆತ್ಮಹತ್ಯೆಗೆ ನನ್ನ ಪತ್ನಿಯೇ ಪ್ರಚೋದಿಸಿರುತ್ತಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶಂಕರ್ ಉಲ್ಲೇಖಿಸಿದ್ದಾರೆ.
ಶಂಕರ್ ಅವರ ಹಿರಿಯ ಮಗಳು ಎಂಜಿನಿಯರಿಂಗ್ ಪದವಿಧರೆಯಾಗಿದ್ದರೆ, ಕಿರಿ ಮಗಳು ಎಂಬಿಎ ಪದವಿ ಪಡೆದಿದ್ದಳು. ಮಗ ಮಧುಸಾಗರ್ ಸಾಫ್ಟ್ ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ. ಇಬ್ಬರು ಹೆಣ್ಣುಮಕ್ಕಳು ಐಎಎಸ್ ಮಾಡುವ ಕನಸು ಕಂಡಿದ್ದರು ಎನ್ನಲಾಗಿದೆ. ಆದರೆ ಈಗ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
5 ಶವಗಳ ಮಧ್ಯೆ 2 ವರ್ಷದ 5 ದಿನ ಮಗು ಬದುಕುಳಿದಿದ್ದೇ ರೋಚಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ