Latest

ಅಧಿಕಾರಿಗಳು, ನೌಕರರಿಗೆ ಸರಕಾರದಿಂದ ಗಂಭೀರ ಎಚ್ಚರಿಕೆ; ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರಾಂತಿಕಾರಿ ಸುತ್ತೋಲೆ

ಯಾವುದೇ ಸರಕಾರಿ ನೌಕರನು ನಿಯಮಿಸಲಾದ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಯಾವುದೇ ಕೃತ್ಯದ ಸಮರ್ಥನೆಗಾಗಿ ಯಾವುದೇ ನ್ಯಾಯಾಲಯ ಅಥವಾ ಪತ್ರಿಕೆಗೆ ಮೊರೆ ಹೋಗತಕ್ಕದ್ದಲ್ಲ.

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಸರಕಾರ ಅಧಿಕಾರಿಗಳ ನಡವಳಿಕೆ, ಅದರಲ್ಲೂ ವಿಶೇಷವಾಗಿ ಮಾಧ್ಯಮಗಳ ವಿಷಯದಲ್ಲಿ ಹೇಗಿರಬೇಕೆನ್ನುವ ಕುರಿತು ಗಂಭೀರ ಎಚ್ಚರಿಕೆ ನೀಡಿ ಸುತ್ತೋಲೆ ಹೊರಡಿಸಿದೆ.

ಶನಿವಾರ ರಾಜ್ಯ ಸರಕಾರದಿಂದ ಕ್ರಾಂತಿಕಾರಕ ಸುತ್ತೋಲೆಯೊಂದು ಹೊರಬಿದ್ದಿದೆ. ಯಾವುದೇ ಅಧಿಕಾರಿ ಪತ್ರಿಕಾಗೋಷ್ಠಿ ಅಥವಾ ಪತ್ರಿಕಾ ಹೇಳಿಕೆ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಇಂತಹ ಹೇಳಿಕೆಗಳಿಂದ ಸರಕಾರದ ಆಡಳಿತ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಲಾಗಿದೆ.

ಅಧಿಕಾರಿಗಳು ಅಧಿಕೃತ ಕರ್ತವ್ಯಗಳನ್ನು ನೀಡುವುದನ್ನು ಹೊರತುಪಡಿಸಿ ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನಿಷೇಧಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ರವಿಕುಮಾರ ತಿಳಿಸಿದ್ದಾರೆ.

ಯಾವುದೇ ಸರಕಾರಿ ನೌಕರನು ನಿಯಮಿಸಲಾದ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಯಾವುದೇ ಕೃತ್ಯದ ಸಮರ್ಥನೆಗಾಗಿ ಯಾವುದೇ ನ್ಯಾಯಾಲಯ ಅಥವಾ ಪತ್ರಿಕೆಗೆ ಮೊರೆ ಹೋಗತಕ್ಕದ್ದಲ್ಲ. 

ಇದನ್ನು ಉಲ್ಲಂಘಿಸಿದಲ್ಲಿ ಅಂತಹ ನೌಕರನ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಸರಕಾರಿ ಯೋಜನೆ ಮತ್ತು ಅಧಿಕೃತ ಮಾಹಿತಿಗಳನ್ನು ಪ್ರಸಾರ ಮಾಡಲು ಮಾತ್ರ ಅಧಿಕಾರಿಗಳು ಮಾಧ್ಯಮಗಳನ್ನು ಬಳಸಬಹುದಾಗಿದೆ. ಕುಂದು ಕೊರತೆಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಇಲಾಖೆ, ಸರಕಾರದ ಸಾಧನೆಗಳನ್ನು ವಯಕ್ತಿಕ ಸಾಧನೆ ಎಂಬಂತೆ ಪ್ರದರ್ಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಸರಕಾರದ ಯೋಜನೆ ಪ್ರಸಾರ ಮಾಡುವುದಿದ್ದರೂ ಸರಕಾರದ ಹೆಸರಿನಲ್ಲಿ ತೆರೆಯಲಾದ ಖಾತೆಯಿಂದಲೇ ಪ್ರಕಟಿಸಬೇಕೆೇ ವಿನಃ ವಯಕ್ತಿಕ ಖಾತೆಯಿಂದ ಪ್ರಸಾರ ಮಾಡುವಂತಿಲ್ಲ.

ಸಂಪೂರ್ಣ ಸುತ್ತೋಲೆಗೆ ಇಲ್ಲಿ ಕ್ಲಿಕ್ ಮಾಡಿ – e DPAR 425 SAS 2021 14 09 2021

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)

ಕೊಳವೆ ಬಾವಿಯಿಂದ ಮಗುವಿನ ಶವ ಹೊರಕ್ಕೆ: ಭಯಾನಕ ಸತ್ಯ ಬಹಿರಂಗ, ಅಪ್ಪ ಆರೆಸ್ಟ್ (ವಿಡೀಯೋ ಸಹಿತ ವರದಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button