Kannada NewsKarnataka NewsLatest

ಕೊಳವೆ ಬಾವಿಯಿಂದ ಮಗುವಿನ ಶವ ಹೊರಕ್ಕೆ: ಭಯಾನಕ ಸತ್ಯ ಬಹಿರಂಗ, ಅಪ್ಪ ಆರೆಸ್ಟ್ (ವಿಡೀಯೋ ಸಹಿತ ವರದಿ)

ಪ್ರಗತಿವಾಹಿನಿ ಸುದ್ದಿ, ರಾಯಬಾಗ – ಕೊಳವೆ ಬಾವಿಯಲ್ಲಿ ಮಗು ಬಿದ್ದಿದ್ದ ಪ್ರಕರಣಕ್ಕೆ ಭಯಾನಕ ತಿರುವು ಸಿಕ್ಕಿದ್ದು, ಬಾಲಕನ ಅಪ್ಪನೇ ಮಗುವನ್ನು ಕೊಂಡು ಬಾವಿಗೆ ಹಾಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಪ್ಪ ಸಿದ್ದಪ್ಪನನ್ನು ವಶಕ್ಕೆ ಪಡೆದಿದ್ದಾರೆ.

Home add -Advt

ಅಲಕನೂರಿನಲ್ಲಿ ನಿನ್ನೆಯಿಂದ ಮಗು ನಾಪತ್ತೆಯಾಗಿತ್ತು. ಅಪ್ಪನೇ ಪೊಲೀಸ್ ಠಾಣೆಯಲ್ಲಿ ಮಗುವಿನ ಅಪಹರಣವಾಗಿದೆ ಎಂದು ದೂರು ನೀಡಿದ್ದ. ಆದರೆ ಇಂದು ಮಗು ಕೊಳವೆ ಬಾವಿಯಲ್ಲಿ ಬಿದ್ದಿದೆ ಎಂದು ಗೊತ್ತಾಗಿ ಕಾರ್ಯಾಚರಣೆ ನಡೆಸಲಾಯಿತು. ಒಂದು ಗಂಟೆ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಮಗುವಿನ ಶವವನ್ನು ಹೊರಕ್ಕೆ ತೆಗೆದಿದ್ದಾರೆ.

ಮಗುವಿನ ತಂದೆ ಸಿದ್ದಪ್ಪ ಮಗುವನ್ನು ಕೊಲೆ ಮಾಡಿರುವುದಾಗಿ ಅಜ್ಜಿ ಸರಸ್ವತಿ ಆರೋಪಿಸಿದ್ದಾರೆ.

 ಮಗುವನ್ನು ಕೊಲೆ ಮಾಡಿ ಅಪ್ಪನೇ ಕೊಳವೆ ಬಾವಿಗೆ ಎಸೆದಿದ್ದಾನೆ ಎನ್ನುವ ಆರೋಪ ಬಂದಿದೆ. ಅಪ್ಪನನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ಗೊತ್ತಾಗಬೇಕಿದೆ.

Related Articles

Back to top button