Kannada NewsLatest

ಪ್ರತಿಜ್ಞಾ ಪಂಚಾಯತ ಬೃಹತ್ ಅಭಿಯಾನಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಸಿದ್ಧತೆ

ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ಪ್ರತಿಜ್ಞಾ ಪಂಚಾಯತ ಬೃಹತ್ ಅಭಿಯಾನವನ್ನು ಆರಂಭಿಸಲು ಮುಂದಾಗಿರುವ ಪ್ರಥಮ ಜಗದ್ಗುರುಗಳಾದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಯವರು ಮಲೈ ಮಾದೇಶ್ವರ ಬೆಟ್ಟದಿಂದ ಆರಂಭ ಮಾಡಿ ಮೈಸೂರು ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಕಾರ್ಯಕ್ರಮ ಮಾಡುತ್ತ ಬೆಂಗಳೂರಿಗೆ ತಲುಪಿಸುವ ಉದ್ದೇಶ ಹೊಂದಿದ್ದಾರೆ.

ಇದೇ ಕಾರ್ಯಕ್ರಮದ ಭಾಗವಾಗಿ ಶುಕ್ರವಾರ 24ರಂದು ಬೆಳಗಾವಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಸ್ವಾಮೀಜಿಯವರು,ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ,ಹಾಗೂ ಬಸನಗೌಡ ಪಾಟೀಲ್ ಯತ್ನಾಳ ಪಾಲ್ಗೊಳ್ಳಲಿದ್ದಾರೆ ಎಂದು ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮೀತಿ ಬೆಳಗಾವಿಯ ಕಾರ್ಯಾಧ್ಯಕ್ಷ ನಿಂಗಪ್ಪ ಫಿರೋಜಿ ಹೇಳಿದರು.

ಅವರು ಪಟ್ಟಣದ ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮೀತಿಯ ಮೂಡಲಗಿ ಘಟಕದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡುತ್ತ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಅನೇಕ ಧುರೀಣರು ತಮ್ಮ ಸಹಾಯ ಸಹಕಾರ ನೀಡುತ್ತಿದ್ದಾರೆ. ಜೊತೆಗೆ ಬೆಳಗಾವಿ ಜಿಲ್ಲೆಯ ಸಮಾಜದ ಎಲ್ಲ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಕರೆ ಕೊಟ್ಟರು.

ಸಮೀತಿಯ ಮೂಡಲಗಿ ಘಟಕದ ಅಧ್ಯಕ್ಷರಾದ ಬಸವರಾಜ ಪಾಟೀಲ್ ಮಾತನಾಡುತ್ತ ನಾನು ಈಗಾಗಲೇ ತಾಲೂಕಿನ ಪ್ರತಿ ಹಳ್ಳಿಗಳಿಗೂ ಭೇಟಿ ಕೊಟ್ಟು ಸಮಾಜದ ಎಲ್ಲ ಜನರಿಗೆ ಅಭಿಯಾನದ ಅರಿವು ನೀಡುತ್ತ ಜಾಗೃತಿ ಮೂಡಿಸಿದ್ದೇನೆ, ಜೊತೆಗೆ ಪ್ರತಿಜ್ಞಾ ಪಂಚಾಯತ ಪ್ರತಿಜ್ಞಾ ಭೋದನೆಯ ಪತ್ರದ ಮೇಲೆ ಸಹಿಗಳನ್ನು ಸಂಗ್ರಹಿಸಿದ್ದೇನೆ ಹಾಗೂ 24ರಂದು ಬೆಳಗಾವಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾವಿರಾರು ಸಮಾಜ ಬಾಂಧವರಿಂದ ಇನ್ನು ಹೆಚ್ಚಿನ ಸಹಿಗಳನ್ನು ಪಡೆಯಲಿದ್ದೇವೆ ಎಂದರು.

ಹನಮಂತ ಶಿವಾಪುರ ಅವರು ಮಾತನಾಡುತ್ತ ಪಂಚಮಸಾಲಿಗರ 2ಎ ಮೀಸಲಾತಿಗಾಗಿ ಸರಕಾರ ಕೊಟ್ಟ ಗಡುವು ಸೆ.15ಕ್ಕೆ ಮುಗಿದಿದ್ದರು,ಕಣ್ಮುಚ್ಚಿ ಕುಳಿತಿದೆ.ಇದೇ ರೀತಿ ಯಾದರೆ ಮುಂದಿನ ದಿನಗಳಲ್ಲಿ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದರು.ಈ ಸಂಧರ್ಭದಲ್ಲಿ ಮುಖಂಡರಾದ ದೀಪಕ ಜುಂಜರವಾಡ, ಅಜ್ಜಪ್ಪಾ ಬಳಿಗಾರ, ಹೊಳೆಪ್ಪಾ ಶಿವಾಪೂರ,ಈಶ್ವರ ಢವಳೇಶ್ವರ ಹಾಜರಿದ್ದರು.
ಹಿರೇಬಾಗೇವಾಡಿಗೆ ಬುಧವಾರ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button