Latest

ಮನೆ ಛಾವಣಿಯಲ್ಲಿ ಅಡಗಿದ್ದ 8 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಸರನಗದ್ದೆಯ ಮನೆಯ ಛಾವಣಿಯಲ್ಲಿ ಅಡಗಿದ್ದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಇಂದು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

ಉರಗ ತಜ್ಞ ಪ್ರಶಾಂತ ಹುಲೇಕಲ್ ಕೃಷ್ಣ ಆಚಾರಿ ಎಂಬುವವರ ಮನೆಯ ಛಾವಣಿಯ ಹಂಚಿನಡಿ ಸೇರಿದ್ದ ಕಾಳಿಂಗ ಸರ್ಪವನ್ನು ಅತ್ಯಂತ ಸಾಹಸ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂಧಿಗಳ ಉಪಸ್ಥಿತಿಯಲ್ಲಿ ಹಿಡಿದು ನಂತರ ಶಿವಗಂಗಾ ಫಾಲ್ಸ ಬಳಿಯ ನಿರ್ಜನ ಪ್ರದೇಶದ ರಕ್ಷಿತಾರಣ್ಯದಲ್ಲಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

ಈ ಸಂದರ್ಭದಲ್ಲಿ ಹುಲೇಕಲ್ ವಲಯ ಆರ್ಎಫ್ಓ ಮಂಜುನಾಥ ಹೆಬ್ಬಾರ, ಡಿವೈಆರ್ ಎಫ್ಓ ರಾಘವೇಂದ್ರ ಹೆಗಡೆ, ಅರಣ್ಯ ರಕ್ಷಕ ರಾಜೇಶ ನಾಯ್ಕ, ದಾವಲಸಾಬ ಎರಗಟ್ಟಿ ಉಪಸ್ಥಿತರಿದ್ದರು.
ಶೆಂಡೂರ ಗ್ರಾಮದ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

Home add -Advt

Related Articles

Back to top button