Kannada NewsKarnataka News
ಬೀರೇಶ್ವರ ಸೊಸೈಟಿ : 153 ಶಾಖೆಯ ಜೊತೆಗೆ ಇನ್ನೂ 36 ಶಾಖೆ ಆರಂಭಿಸುವ ಗುರಿ – ಅಣ್ಣಾ ಸಾಹೇಬ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ರಾಜ್ಯದ ಗಡಿ ಭಾಗದಲ್ಲಿ ಸ್ಥಾಪನೆಯಾದ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯು ಕರ್ನಾಟಕ-ಮಹಾರಾಷ್ಟ್ರದ ಅತೀ ದೊಡ್ಡ ಸಹಕಾರಿ ಸಂಸ್ಥೆಯಾಗಿ ಪ್ರಗತಿ ಹೊಂದಿ ರಾಷ್ಟ್ರಿಕೃತ ಬ್ಯಾಂಕಿನ ಹಾಗೇ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದ ಸಂಸ್ಥೆಯ 31ನೇಯ ವಾರ್ಷಿಕ ಸರ್ವಸಾಧರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಬೀರೇಶ್ವರ ಸಹಕಾರಿ ಸಂಸ್ಥೆಯು ಸದ್ಯ 153 ಶಾಖೆಗಳನ್ನು ಹೊಂದಿದೆ. ಪ್ರಸಕ್ತ ವರ್ಷದಲ್ಲಿ ಕರ್ನಾಟಕದಲ್ಲಿ 17 ಶಾಖೆಗಳು ಹಾಗೂ ಮಹಾರಾಷ್ಟ್ರದಲ್ಲಿ 19 ಶಾಖೆ ಸೇರಿ ಒಟ್ಟು 36 ಶಾಖೆಗಳನ್ನು ಪ್ರಾರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಕಳೆದ 31 ವರ್ಷದಿಂದ ಆರಂಭವಾದ ಸಂಸ್ಥೆಯ ಮೇಲೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನ ಹೆಚ್ಚು ವಿಶ್ವಾಸ ಇಟ್ಟಿದ್ದು, ಸಂಸ್ಥೆಯ ಸಿಬ್ಬಂದಿಗಳು ಸಹ ಪ್ರಾಮಾಣಿಕ ಸೇವೆಯಿಂದ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳವಣಿಕೆ ಕಂಡಿದೆ. ಸಂಸ್ಥೆಯಲ್ಲಿ ದುಡಿಯುವ ಪ್ರತಿಯೊಬ್ಬ ಸಿಬ್ಬಂದಿಗೆ ಶೇ 44 ರಷ್ಟ್ರು ವೇತನ ಹೆಚ್ಚಿಸಲಾಗಿದೆ ಎಂದರು.
ಸಹಕಾರಿಯು 22.187 ಸದಸ್ಯರು ಹೊಂದಿದೆ. 27.17 ಕೋಟಿ ಶೇರು ಬಂಡವಾಳ, 109.12 ಕಾಯ್ದಿಟ್ಟ ನಿಧಿ. 2804.52 ಕೋಟಿ ರೂ ಠೇವುಗಳು. 2051. 63 ಕೋಟಿ ಸಾಲ ಮತ್ತು ಮುಂಗಡಗಳು. 2960.12 ಕೋಟಿ ದುಡಿಯುವ ಬಂಡವಾಳ ಹಾಗೂ 25.38 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು.
ಅತ್ಯುತ್ತಮ ಶಾಖೆಗಳು: ನಗರ ಪ್ರದೇಶದಲ್ಲಿ ಧಾರವಾಡ ಶಾಖೆ ಪ್ರಥಮ, ಗೋಕಾಕ ಶಾಖೆ ದ್ವಿತೀಯ. ಗ್ರಾಮೀಣ ಪ್ರದೇಶ ಶಾಖೆಗಳಲ್ಲಿ ತೆಲಸಂಗ ಶಾಖೆ ಪ್ರಥಮ, ಪರಮಾನಂದವಾಡಿ ದ್ವಿತೀಯ, ಇನ್ಸೂರನ್ಸ್ ವಿಭಾಗದಲ್ಲಿ ಚಿಕ್ಕೋಡಿ ಶಾಖೆ ಪ್ರಥಮ, ಧಾರವಾಡ ಶಾಖೆ ದ್ವಿತೀಯ ಸ್ಥಾನ ಪಡೆದುಕೊಂಡವು.
ಕೋವಿಡ್ ವಿರುವ ಕಾರಣದಿಂದ ವರ್ಚುವಲ್ ಮೂಲಕ ವಾರ್ಷಿಕ ಸಭೆ ನಡೆಸಲಾಗಿದೆ. ಸಂಸ್ಥೆಯ ಸದಸ್ಯರು ದೈರ್ಯದಿಂದ ಜೀವನ ನಡೆಸಬೇಕು ಮತ್ತು ಹೆಚ್ಚು ಹೆಚ್ಚಾಗಿ ಮೆಡಿಕಲ್ ವಿಮೆ ಹಾಗೂ ಸಾಮಾನ್ಯ ವಿಮೆ ಮಾಡಿಸಬೇಕು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಸದಸ್ಯರಿಗೆ ಕರೆ ನೀಡಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ. ಶ್ರೀ ಬೀರೇಶ್ವರ ಸಹಕಾರಿ ಸಂಸ್ಥೆಯು ಗ್ರಾಮೀಣ ಭಾಗದಿಂದ ತನ್ನ ಕಾರ್ಯಾರಂಭ ಮಾಡಿ ಇಡೀ ರಾಜ್ಯದ ಪ್ರಮುಖ ನಗರಗಳಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಹೆಚ್ಚು ಹೆಚ್ಚು ಶಾಖೆಗಳು ಪ್ರಾರಂಭ ಮಾಡಿರುವುದರಿಂದ ಜನರ ಸಂಪರ್ಕ ಹೆಚ್ಚುತ್ತಿದೆ. ಸಂಸ್ಥೆಯು ಸಹ ಪ್ರಗತಿ ಕಾಣುತ್ತಿದೆ. ಸಹಕಾರಿ ಸಂಸ್ಥೆಯ ಮೂಲಕ ಕೇವಲ ಆರ್ಥಿಕ ವ್ಯವಹಾರ ಮಾಡದೇ ಸಾಮಾಜಿಕ ಮತ್ತು ಶೈಕ್ಷಣಿಕ, ಧಾರ್ಮಿಕ ಸೇವೆಯಲ್ಲಿಯು ಸಹಾಯ ಹಸ್ತ ಚಾಚುತ್ತದೆ ಎಂದರು.
ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ. ಉಪಾಧ್ಯಕಿಷ ಸಿದ್ರಾಮ ಗಡದೆ, ಚಂದ್ರಕಾಂತ ಖೋತ, ಕಲ್ಲಪ್ಪಣ್ಣಾ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಸದಾಶಿವ ಕೋಕಣೆ, ಲಕ್ಷ್ಮಣ ಕಬಾಡೆ, ಪವನ ಪಾಟೀಲ, ಮಲಗೌಡ ಪಾಟೀಲ, ಶಂಕರ ಶಹೀರ, ವ್ಯವಸ್ಥಾಪಕರಾದ ರವೀಂದ್ರ ಚೌಗಲಾ, ಸುರೇಶ ಮಾನೆ, ಬಿ.ಎ.ಗುರುವ, ಎಂ.ಕೆ.ಮಂಗಾವತಿ, ಆರ್.ಜಿ.ಕುಂಬಾರ, ವಿಜಯ ಕಡಕಬಾವಿ, ಎಂ.ಎಂ.ಪಾಟೀಲ ಮುಂತಾದವರು ಇದ್ದರು.
ಬಸವಜ್ಯೋತಿ ಯುಥ್ ಪೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ