ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸಹಕಾರಿ ನಿಯಮಿತದ ಎರಡು ನೂತನ ಶಾಖೆಗಳು ಚಿಕ್ಕೋಡಿ ತಾಲೂಕಿನ ಕಬ್ಬೂರ ಹಾಗೂ ಕೊಣ್ಣೂರಗಳಲ್ಲಿ ಶುಕ್ರವಾರ ಉದ್ಘಾಟನೆಗೊಂಡವು.
ಕಬ್ಬೂರಲ್ಲಿ ೪೩ನೇ ಶಾಖೆಯನ್ನು ರಾಯಬಾಗ ಮತಕ್ಷೇತ್ರ ಶಾಸಕರಾದ ದುರ್ಯೋಧನ ಐಹೊಳೆಯವರು ಉದ್ಘಾಟನೆ ಮಾಡಿ ಮಾತನಾಡಿ, ಇಂದು ಸಹಕಾರಿ ಕ್ಷೇತ್ರವು ಸಾಕಷ್ಟು ವಿಸ್ತರಿಸುತ್ತಿದೆ. ರೈತರ ಹಾಗೂ ಜನಸಾಮಾನ್ಯ ಬದುಕಿಗೆ ಆಶ್ರಯವಾಗುತ್ತಿದೆ. ಅವರ ಹಲವಾರು ಸಮಸ್ಯೆಗಳನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಈ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆಯವರ ಇಚ್ಛಾಶಕ್ತಿಯಿಂದ ಕೆಲವೇ ವರ್ಷಗಳಲ್ಲಿ ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸಹಕಾರಿ ಈ ಭಾಗದಲ್ಲಿ ವಿಸ್ತಾರವಾಗಿ ಬೆಳೆದುನಿಂತಿದೆ. ಅವರ ಸಹಕಾರಿ ಸೇವೆ ಹೀಗೆ ಮುಂದುವರೆಯಲಿ ಎಂದು ಹೇಳಿದರು.
ಗೌರಿಶಂಕರ ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಪವನ ರಮೇಶ ಕತ್ತಿ, ಸುರೇಶ ಬೆಲ್ಲದ, ಮಿಲನ ಪಾಟೀಲ ಉಪಸ್ಥಿತರಿದ್ದರು.
೪೪ನೇ ಶಾಖೆಯು ಚಿಕ್ಕೋಡಿ ತಾಲೂಕಿನ ಕೊಣ್ಣೂರದಲ್ಲಿ ಉದ್ಘಾಟನೆಗೊಂಡಿತು. ಮರಡಿಮಠದ ಶ್ರೀಮದ್ ಘನಲಿಂಗ ಚಕ್ರವರ್ತಿ ಡಾ.ಪವಾಡೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಜಯಾನಂದ ಮುನವಳ್ಳಿಯವರು ಅತಿಥಿಗಳಾಗಿ ಆಗಮಿಸಿದ್ದರು. ಮಹಾಂತೇಶ ಕವಟಗಿಮಠ, ಡಿ.ಎಸ್.ಕರೋಶಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪ್ರಭಾಕರ ಕೋರೆ, ರೈತರ ಬದುಕಿಗೆ ಸಹಕಾರಿ ಕ್ಷೇತ್ರ ವರದಾನವಾಗಬೇಕು, ಮಾರಕವಾಗಬಾರದು. ಇಂದು ದೇಶಾದ್ಯಂತ ಸಹಕಾರಿ ಕ್ಷೇತ್ರ ಸಾಕಷ್ಟು ವಿಸ್ತಾರವಾಗಿ ನಿಂತಿದೆ. ಕೇಂದ್ರ ಸರಕಾರವು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದೆ. ರೈತರ ಜನಸಾಮಾನ್ಯ ಹಿತ ರಕ್ಷಣೆಯೇ ಇದರ ಮೂಲ ಉದ್ದೇಶ. ಅದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಹಕಾರಿ ಕ್ರೆಡಿಟ್ ಸಹಕಾರಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಜನತೆಯ ಸಹಕಾರ ಮುಖ್ಯವಾಗಿದೆ. ಅಂತೆಯೆ ಇದರ ಜನರ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಸುಳಗಾಂವ,ಅಪ್ಪಾಚಿವಾಡಿ,ಮತ್ತಿವಾಡೆ ಗ್ರಾಮದಲ್ಲಿ ಆಹಾರ ಕಿಟ್ ಗಳನ್ನು ವಿತರಿಸಿದ ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ