ಪತ್ನಿಗಾಗಿ ಸೀರೆ ಖರೀದಿಸಿದ ಸಿಎಂ; ಬಾರಪ್ಪ, ಮನೆಯವರಿಗೆ ಸೀರೆ ಖರೀದಿ ಮಾಡು ಎಂದು ವಿಜಯೇಂದ್ರಗೂ ಸೂಚಿಸಿದ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾದಿ ಎಂಫೋರಿಯಂ ಗೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಪತ್ನಿಗಾಗಿ ಭರ್ಜರಿ ಸೀರೆ ಖರೀದಿ ಮಾಡಿದ್ದಾರೆ.
ಇಂದು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ವಿಧಾನಸೌಧದ ಬಳಿ ಗಾಂಧಿ ಹಾಗೂ ಶಾಸ್ತ್ರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ಖಾದಿ ಎಂಪೋರಿಯಂ ಗೆ ಭೇಟಿ ನೀಡಿದರು. ಖಾದಿ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಖಾದಿ ಬಟ್ಟೆಗಳ ಖರೀದಿಗೆ ಜನರು ಹೆಚ್ಚು ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಇದೇ ವೇಳೆ ಸಿಎಂ ಬೊಮ್ಮಾಯಿ ಪತ್ನಿಗಾಗಿ ಸೀರೆ ಖರೀದಿ ಮಾಡಿದರು. ಮೂರು ಸೀರೆಗಳಲ್ಲಿ ಒಂದು ಸೀರೆಯನ್ನು ಆಯ್ಕೆ ಮಾಡಿದ ಸಿಎಂ ಸೀರೆ ಖರೀದಿಸಿ ಮನೆಯಲ್ಲಿ ಬೈಸಿಕೊಳ್ಳದಿದ್ದರೆ ಸಾಕು ಎಂದು ನಗೆ ಚಟಾಕಿ ಬೀರಿದರು.
ಅಲ್ಲದೇ ಜೊತೆಯಲ್ಲಿದ್ದ ಸಚಿವರಾದ ಗೋವಿಂದ ಕಾರಜೋಳ ಹಾಗೂ ಎಂಟಿಬಿ ನಾಗರಾಜ್ ಅವರಿಗೂ ಮನೆಯವಿಗೆ ಸೀರೆ ಖರೀದಿಸುವಂತೆ ಸೂಚಿಸಿದರು.
ಇದೇ ವೇಳೆ ಆಗಮಿಸಿದ ಬಿ.ವೈ.ವಿಜಯೇಂದ್ರ ಅವರನ್ನು ಕರೆದು, ’ಬಾರಪ್ಪ ಮನೆಯವರಿಗೆ ಸೀರೆ ಖರೀದಿ ಮಾಡು’ ಎಂದು ಹೇಳಿದರು. ಸಿಎಂ ಜೊತೆಗೆ ಸಚಿವರಾದ ಕಾರಜೋಳ, ಎಂಟಿಬಿ ನಾಗರಾಜ್ ಹಾಗೂ ವಿಜಯೇಂದ್ರ ಭರ್ಜರಿ ಸೀರೆ ಖರೀದಿ ಮಾಡಿ ಗಮನ ಸೆಳೆದರು.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿಗೆ ಸಂಕಷ್ಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ