Karnataka News

ನಿಮ್ಮಪ್ಪನೇ ಹೊಗಳಿದ್ದರು, ನಿಮ್ಮದೇನು? ಎಂದ ಸಿ.ಸಿ.ಪಾಟೀಲ

ಕುಮಾರಸ್ವಾಮಿಯವರ ಆರ್. ಎಸ್. ಎಸ್. ಕುರಿತ ಹೇಳಿಕೆಗೆ ಸಚಿವ ಸಿ.ಸಿ.ಪಾಟೀಲ್ ಖಂಡನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜಕಾರಣಕ್ಕಾಗಿ ಕೆಲವರನ್ನು ತುಷ್ಟಿಕರಣ ಮಾಡಲು ಆರೆಸ್ಸೆಸ್ಸನ್ನು ದೂಷಿಸುವುದು ಕೆಲವು ರಾಜಕಾರಣಿಗಳ ಚಾಳಿಯಾಗಿದೆ. ಈಗ ಉಪಚುನಾವಣೆಗಳು ಹತ್ತಿರವಿರುವುದರಿಂದ ಕುಮಾರಸ್ವಾಮಿಯವರಿಗೂ ಈ ಚಾಳಿ ಕಾಡುತ್ತಿರಬಹುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ.

ಆರ್ ಎಸ್ಎಸ್ ಕುರಿತು ಎಚ್.ಡಿ.ಕುಮಾರಸ್ವಾಮಿ ನೀಡಿದ ( RSS ನ 4 ಸಾವಿರ IAS, IPSಗಳು; ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರ್.ಎಸ್.ಎಸ್ ಆರ್ಭಟ; ಹೆಚ್ ಡಿಕೆ ಗಂಭೀರ ಆರೋಪ )ಹೇಳಿಕೆಗೆಅವರುಪ್ರತ್ರಿಕ್ರಿಯಿಸಿದರು.
ಆರ್. ಎಸ್. ಎಸ್. ಕೋಟ್ಯಂತರ ಜನರಿಗೆ ದೇಶ ಸೇವೆಯ ಬಗ್ಗೆ ಮತ್ತು ಆಪತ್ತಿನ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಸೇವೆ ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಪಾಠ ಹೇಳಿಕೊಟ್ಟಿದೆಯೇ ವಿನಹ, ಎಂದಿಗೂ ವಂಶಪಾರಂಪರ್ಯ ಅಥವಾ ಕುಟುಂಬ ರಾಜಕಾರಣವನ್ನು ಬೋಧಿಸಿಲ್ಲ.
ಆರೆಸ್ಸೆಸ್ ಈ ದೇಶದ ದೊಡ್ಡ ಅಪ್ರತಿಮ ಸಂಘಟನೆಯಾಗಿದೆ. ಈ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೂ ಎಷ್ಟೋ ಮಂದಿ ಯಾವುದೇ ಚುನಾವಣಾ ರಾಜಕೀಯಕ್ಕೆ ಆಗಲಿ ಅಥವಾ ಅಧಿಕಾರಕ್ಕಾಗಲೀ ಗಂಟು ಬಿದ್ದಿಲ್ಲ ಎಂಬುದು ಕುಮಾರಸ್ವಾಮಿಯವರಿಗೆ ಅರ್ಥವಾಗಬೇಕಿತ್ತು ಎಂದು ಅವರು ಹೇಳಿದ್ದಾರೆ.

ಆರ್. ಎಸ್. ಎಸ್. ನ ಸೇವಾ ಮನೋಭಾವವನ್ನು ಹಿಂದೆ  ಕುಮಾರಸ್ವಾಮಿ ಅವರ ತಂದೆಯವರಾದ ದೇವೇಗೌಡರೇ ಸ್ವತಹ ಮನಃ ಪೂರ್ತಿಯಾಗಿ ಪ್ರಶಂಸಿಸಿದ್ದರು ಎಂಬುದನ್ನು ಇವರು ನೆನಪು ಮಾಡಿಕೊಂಡರೆ ಸಾಕು ಎಂದು ಅವರು ಹೇಳಿದ್ದಾರೆ.

 

RSS ನ 4 ಸಾವಿರ IAS, IPSಗಳು; ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರ್.ಎಸ್.ಎಸ್ ಆರ್ಭಟ; ಹೆಚ್ ಡಿಕೆ ಗಂಭೀರ ಆರೋಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button