Kannada NewsKarnataka News

​ಪಂತಬಾಳೇಕುಂದ್ರಿ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಿದ ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ​ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಅನುಪಸ್ಥಿತಿಯಲ್ಲಿ ಲಕ್ಷ್ಮಿ ತಾಯಿ ಕೋ ಆಪರೇಟಿವ್ ಸೊಸೈಟಿ ಚೇರಮನ್, ಹರ್ಷ ಶುಗರ್ಸ್ ಎಂಡಿ ಚನ್ನರಾಜ ಹಟ್ಟಿಹೊಳಿ ಪಂತ ಬಾಳೆಕುಂದ್ರಿ ಗ್ರಾಮದಲ್ಲಿ ಅಭಿೃವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು. 
​ ಗಂಗಣ್ಣ ಕಲ್ಲೂರ, ಗ್ರಾಮದ ಹಿರಿಯರು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವಸದಸ್ಯರು ಸೇರಿ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ  ಗ್ರಾಮದ ವಿವಿಧ ಅಭಿವೃದ್ಧಿ  ಕಾರ್ಯಗಳ ಹಾಗೂ ಕುಂದುಕೊರತೆಗಳ ಕುರಿತಾಗಿ ಚರ್ಚೆಯನ್ನು ನಡೆಸಿದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವ ಸದಸ್ಯರು​ ಚನ್ನರಾಜ ಹಟ್ಟಿಹೊಳಿ ಹಾಗೂ ಗಂಗಣ್ಣ ಕಲ್ಲೂರ ಅವರನ್ನು ಸನ್ಮಾನಿಸಿದರು.
ಗ್ರಾಮದ ದುರ್ಗಾಮಾತಾ ದೇವಸ್ಥಾನದ ಕಟ್ಟಡ  ಪ್ರಗತಿಯಲ್ಲಿದ್ದು, ​ ಕಟ್ಟಡದ ಸ್ಲ್ಯಾಬ್ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು, ಚನ್ನರಾಜ ಹಟ್ಟಿಹೊಳಿ ಹಾಗೂ ಗ್ರಾಮದ ಹಿರಿಯರೆಲ್ಲ ಸೇರಿ ಪೂಜೆ​ ನೆರವೇರಿಸಿ ಚಾಲನೆಯನ್ನು ನೀಡಿದರು.​ ​ರೈತರ ಹೊಲಗಳಿಗೆ ತೆರಳುವ ರಸ್ತೆ ಕಾಮಗಾರಿಗೆ ಒಟ್ಟು ​10 ಲಕ್ಷ ರೂ,ಗಳ​ ​ಮಂಜೂರಾಗಿದ್ದು ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೂ ಸಹ ಚಾಲನೆಯನ್ನು‌ ನೀಡಲಾಯಿತು. ಗ್ರಾಮದ ರೈತರು ತಮ್ಮ ಹೊಲಗದ್ದೆಗಳಿಗೆ ತೆರಳಲು ರಸ್ತೆ​ ನಿರ್ಮಾಣ ಮಾಡಿಕೊಡಬೇಕೆನ್ನುವ​ ಬೇಡಿಕೆಯ​ನ್ನು ಈ ಹಿಂದೆ ಶಾಸಕರ ಮುಂದೆ ಇಟ್ಟಿದ್ದರು.
ಗ್ರಾಮದ ರಾಮೇಶ್ವರ ದೇವಸ್ಥಾನದ ಕಮೀಟಿಯವರು ದೇವಸ್ಥಾನದ ಅಡುಗೆ ಕೋಣೆಗೆ ಫೇವರ್ಸ್ ಅಳವಡಿಸಿ ಕೊಡಲು‌ ಬೇಡಿಕೆಯನ್ನು ಇಟ್ಟಿದ್ದು, ಅವರ ಬೇಡಿಕೆಗೂ ಸಹ ಶೀಘ್ರದಲ್ಲಿ ಸ್ಪಂದಿಸ​ುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಇದಾದ ನಂತರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಚನ್ನರಾಜ ಹಟ್ಟಿಹೊಳಿ​,​ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿನ ಕುಂದುಕೊರತೆಗಳ​ನ್ನು​ ಆಲಿಸಿದರು​.​ ಈಗಾಗಲೇ ಶಾಲೆಗೆ ಹೆಚ್ಚುವರಿಯಾಗಿ ಮೂರು ಕೊಠಡಿಗಳ ಕಾಮಗಾರಿಗಳು​ ಮಂಜೂರಾಗಿದ್ದು, ಅವುಗಳ ಕಾಮಗಾರಿ​ ಪ್ರಗತಿಯಲ್ಲಿವೆ​.​ ಜೊತೆಗೆ ಇನ್ನೂ ಒಂದು ಕೊಠಡಿಯ ಬೇಡಿಕೆಯನ್ನಿಟ್ಟಿದ್ದು, ಶೀಘ್ರದಲ್ಲೇ ಅದನ್ನು‌ ಸಹ ಕೈಗೆತ್ತಿಕೊಳ್ಳಲಾಗುವುದು​ ಎಂದು ಭರವಸೆ ನೀಡಲಾಯಿತು..
ಈ‌ ಸಂದರ್ಭದಲ್ಲಿ ಗ್ರಾಮದ ಹಿರಿಯರು, ​ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಬೇದಾ ಸನದಿ, ಇಸ್ಮೈಲ್ ಮಕಾನದಾರ, ರಸೂಲ್ ಮಕಾನದಾರ, ಅಪ್ಸರ್ ಜಮಾದಾರ, ಮೈನು‌ ಮಕಾನದಾರ, ಪ್ರೇಮ ಕೋಲಕಾರ, ಸಾಗರ ಪಾಟೀಲ, ಹೊನ್ನಗೌಡ ಪಾಟೀಲ, ಸುರೇಶ ಕಲೋಜಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಗಲಿ ​ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button