Kannada NewsLatest

ಜನಪ್ರತಿನಿಧಿಗಳ ಎದುರಿನ ಸಮಸ್ಯೆ ಮತ್ತು ಸವಾಲುಗಳು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಸಮಾಜಸೇವೆಯಲ್ಲಿ ತೊಡಗಬೇಕೆಂದು ಪ್ರೊ.ಸಿ.ಜಿ.ಮಠಪತಿ ಸಲಹೆ ನೀಡಿದ್ದಾರೆ.

ಶಿವಬಸವನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಜನಪ್ರತಿನಿಧಿಗಳ ಎದುರಿನ ಸಮಸ್ಯೆ ಮತ್ತು ಸವಾಲುಗಳ ವಿಷಯ ಕುರಿತು ಉಪನ್ಯಾಸ ನೀಡಿದರು.

ನಾಯಕನ ಮೊದಲ ಗುಣ ಅಪರಿಮಿತ ತಾಳ್ಮೆ. ಸಚಿವಾಲಯ ಗ್ರಾಂ ಪಂಚಾಯತಿ ಮಹಾನಗರ ಪಾಲಿಕೆಗಳು ಮಠ ಕ್ಷೇತ್ರಗಳು ದೇವಾಲಯವಿದ್ದಂತೆ ಜನಪ್ರತಿನಿಧಿಗಳು ಜನಕಲ್ಯಾಣ ಮಾಡುವದೇವರಿದ್ದಂತೆ. ಈ ಪ್ರಜ್ಞೆಜನ ಪ್ರತಿನಿಧಿಗಳಿಗೆ ಇದ್ದರೆ ಸಾಕು.

ರಾಜಕಾರಣದಲ್ಲಿ ಸ್ವಜನ ಪಕ್ಷಪಾತ ಬೇಡ. ಲಿಂಗಾಯತ ವೀರಶೈವ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸಿದರೆ ಅವರ ಬೆಂಬಲ ಮತ್ತು ಅಭಿಮಾನ ಜನಪ್ರತಿ ನಿಧಿಗಳಿಗೆ ಇರುತ್ತದೆ. ಸಮಾಜದ ಅಭಿಮಾನವನ್ನು ಜನಪ್ರತಿನಿಧಿಗಳು ತಮ್ಮ ನರ ನಾಡಿಗಳಲ್ಲಿ ತುಂಬಿಕೊಂಡರೆ ಮಾತ್ರ ಸಮಾಜವೆಂಬ ಹೂವೂ ಅರಳಿ ಪರಿಮಳಿಸಲು ಸಾಧ್ಯ. ಜನಪ್ರತಿನಿಧಿಗಳು ಟೀಕೆಗಳಿಗೆ ಕಿವಿಗೊಡದೆ ಸಾಧನೆಯಿಂದ ತಮ್ಮ ಯೋಗ್ಯತೆಯನ್ನು ಪ್ರಚುರ ಪಡಿಸಬೇಕು. ಆಯ್ಕೆಯ ಮುನ್ನಕಿವುಡನಾಗಿ ಆರಿಸಿ ಬಂದ ಮೇಲೆ ಮೂಗನಾಗಬೇಕು ಅದುವೇ ಜನಪ್ರತಿನಿಧಿಯ ಸಲ್ಲಕ್ಷಣ. ಬೆಳಗಾವಿಯಲ್ಲಿ ಕನ್ನಡವನ್ನ ಉಳಿಸಿ ಬೆಳೆಸುವ ಕಾರ್ಯಕ್ಕೆ ತಮ್ಮನ್ನು ಅರ್ಪಿಸಿಕೊಳ್ಳ ಬೇಕು ಎಂದು ಹೇಳಿದರು.

ಸಂಸದೆ ಮಂಗಲಾ ಅಂಗಡಿ ಅವರು ಮತದಾರರ ಹಿತರಕ್ಷಣೆ ಕಾಪಾಡಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ತಿಳಿಸಿದರು. ಮಹಾನಗರ ಪಾಲಿಕೆಯ ಸದಸ್ಯರ ಪ್ರತಿನಿಧಿಯಾಗಿ ಮಾತನಾಡಿದ   ಹನುಮಂತ ಕೊಂಗಾಲಿ ಅವರು ಸಮಾಜದ ಅಭಿವೃದ್ಧಿಕಾರ್ಯಗಳನ್ನೂ ದೇವರ ಪೂಜೆಯಂತೇ ಪೂರೈಸುತ್ತೇವೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರತ್ನಪ್ರಭಾ ಬೆಲ್ಲದ ಅವರು ಜನಪ್ರತಿನಿಧಿಗಳ ಜವಾಬ್ದಾರಿ ಬಹುದೊಡ್ಡದು. ಸಮಾಜದ ಋಣ ತೀರಿಸುವ ಕೈಂಕರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳಲು ಮನವಿ ಮಾಡಿದರು. ವೀರಶೈವ ಲಿಂಗಾಯತ ಸಮಾಜದ ಸಂಘಟನೆಯ ತುರ್ತು ಅವಶ್ಯಕತೆಯ ಕುರಿತು ತಿಳಿಸಿದರು.

ಆಶೀರ್ವಚನ ನೀಡಿದ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು, ಜೀವನದಲ್ಲಿ ಸೇವೆಗೆ ಮಹತ್ವದ ಸ್ಥಾನವಿದೆ. ಜನಸೇವೆಯಲ್ಲಿ ಜನಾರ್ಧನನ ಸೇವೆ ಅಡಗಿದೆ. ವೈದ್ಯಕೀಯ ಸಿಬ್ಬಂದಿಯು ಕರೊನಾ ಸಂದರ್ಭದಲ್ಲಿ ದೇವರಂತೆ ಜನಸೇವೆ ಮಾಡಿದ್ದಾರೆಂದು ತಿಳಿಸಿ ಅವರನ್ನು ಅಭಿನಂದಿಸಿದರು.

ಅತಿಥಿಗಳಾಗಿ ಡಾ.ಶಿವಾನಂದ ಮಾಸ್ತಿಹೊಳಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ ಹೊಸದಾಗಿ ಆಯ್ಕೆಯಾದ ರೇಖಾ ಹೂಗಾರ್, ವೀಣಾ ವಿಜಾಪುರೆ, ರಾಜಶೇಖರ್‌ ಡೋನಿ, ಸವಿತಾ ಪಾಟೀಲ್, ಅಸ್ಮಿತಾ ಪಾಟೀಲ್, ಹನುಮಂತ ಕೊಂಗಾಲಿ, ಶಂಕರಗೌಡ ವಿಲಾಸ್ ಪಾಟೀಲ್‌ ಅವರನ್ನು ಸತ್ಕರಿಸಲಾಯಿತು. ಆಶಾ ಪಾಟೀಲ್ ಪ್ರಸಾದ್ ದಾಸೋಹ ಪೂರೈಸಿದರು, ಸುನಿತಾ ದೇಸಾಯಿ ನಿರೂಪಿಸಿದರು.

ಮುರಗೋಡ ಮಹಾಂತಜ್ಜನ ಕುರಿತ ಭಕ್ತಿಗೀತೆಯನ್ನು  ನಂದಿತಾ ಮಾಸ್ತಿಹೊಳಿಮಠ ಹಾಡಿದರು. ಅನ್ನಪೂರ್ಣ ಹಿರೇಮಠ ಅವರಿಂದ ಅಣ್ಣನವರ ನುಡಿದರೆ ಮುತ್ತಿನಹಾರದಂತೆ ವಚನ ಚಿಂತನೆ ನಡೆಯಿತು. ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಯುವಘಟಕದ ಅಧ್ಯಕ್ಷ ಚೇತನ ಅಂಗಡಿ ಅವರು ಸಭಿಕರನ್ನು ಸ್ವಾಗತಿಸಿದರು.

ಪಿ.ಎಸ್. ಜಾವೂರ ಅವರು ವೀರಶೈವ ಲಿಂಗಾಯತ ಸಮಾಜದ ಎರಡು ಕಣ್ಣುಗಳಿದ್ದ ಜಗದೀಶ್‌ ಜಕಾತಿ ಮತ್ತು ಕಲ್ಯಾಣ ರಾವ್ ಮುಚಲಂಬಿ ಅವರು ಲಿಂಗೈಕ್ಯರಾದ ಪ್ರಯುಕ್ತ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ನುಡಿ ನಮನ ಸಲ್ಲಿಸಿದರು. ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ಶಶಿಕಾಂತ ನಾಯಕ, ವಿ.ಕೆ.ಪಾಟೀಲ, ಪ್ರೊ.ಎ.ಬಿ.ಕೊರಬು, ಸೋಮಲಿಂಗ ಮಾವಿನಕಟ್ಟಿ, ಜ್ಯೋತಿ ಬದಾಮಿ, ಡಾ.ಗುರುದೇವಿ ಹುಲೆಪ್ಪನವರಮಠ, ಆರ್.ಸಿ.ಪಾಟೀಲ, ರಮೇಶ ಕಳಸಣ್ಣವರ ಮೊದಲಾದವರು ಉಪಸ್ಥಿತರಿದ್ದರು.

ದುರ್ಗಾ ಮಾತಾ ದೌಡ ಮೆರವಣಿಗೆಯಲ್ಲಿ ಭಾಗಿಯಾದ ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button