Kannada NewsKarnataka News

ಸಮಾಜ ಅಭಿವೃದ್ದಿಗೆ ಶ್ರಮಿಸುವುದೆ ಸಮಾಜ ಸೇವೆ – ಶಾಸಕ ಅಭಯ ಪಾಟೀಲ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಮಾಜದ ಅಭವೃದ್ದಿಗೆ ನಿರಂತರ ಶ್ರಮಿಸುವದೇ ಸಮಾಜ ಸೇವೆಯಾಗಿದ್ದು, ಲಭಿಸಿದ ಅವಕಾಶಗಳನ್ನು ಸದುಪಯೋಗ ಪಡೆಸಿಕೊಂಡು ನಿಸ್ವಾರ್ಥ ಭಾವನೆಯಿಂದ ಸಮಾಜ ಸೇವೆಗೆ ಮುಂದಾಗಬೇಕೆಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ತಮ್ಮ ಅಭಿಪ್ರಾಯವ್ಯಕ್ತ ಪಡಿಸಿದರು.
ಬೆಳಗಾವಿಯಲ್ಲಿ ರವಿವಾರ ಸಾಯಂಕಾಲ ಪೌಂಡ್ರಿ ಕ್ಲಸ್ಟರ್ ಸಭಾಗೃಹದಲ್ಲಿ ನಡೆದ ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ (ಜಿತೋ) ಬೆಳಗಾವಿ ವಿಭಾಗದ ೨೦೨೧-೨೨ ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಸಮಾಜ ಸೇವೆ ಮಾಡಲು ಎಲ್ಲರಿಗೂ ಅವಕಾಶಗಳು ಸಿಗುವುದಿಲ್ಲ. ನಿಸ್ವಾರ್ಥ ಭಾವನೆ, ಸಮಾಜದ ಅಭಿವೃದ್ದಿ , ಮಾನವ ಕಲ್ಯಾಣದ ಸೇವೆಗಳು, ಮತ್ತು ಯುವಕರಿಗೆ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳನ್ನು ಹಾಕಿಕೊಂಡು ಕೆಲಸ ಕಾರ್ಯ ಮಾಡಿದರೆ ಮಾತ್ರ ಸಮಾಜ ಸೇವೆಗೆ ಸಾರ್ಥಕತೆ ಲಭ್ಯವಾಗುವುದು ಎಂದರು.
ಸಮಾರಂಭಕ್ಕೆ ಆಗಮಿಸಿದ ಇನ್ನೊರ್ವ ಮುಖ್ಯ ಅತಿಥಿ ಮಾಜಿ ಶಾಸಕ ಹಾಗೂ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರಾದ ಸಂಜಯ ಪಾಟೀಲ ಅವರು ಮಾತನಾಡಿ, ಜಿತೋ ಸಂಸ್ಥೆಯು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಇಂದು ಜನಮಾನಸದಲ್ಲಿ ಮನೆ ಮಾತಾಗಿದೆ. ಇಂತಹ ಸೇವಾಭಾವಿ ಸಂಸ್ಥೆಗಳ ಮೂಲಕ ಸಮಾಜ ಸೇವೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಜನರು ಅಪೇಕ್ಷೆಸುತ್ತಾರೆ . ಧಾರ್ಮಿಕ, ಸಾಮಾಜಿಕ ಮತ್ತು ವ್ಯವಹಾರಿಕ ಸೇವೆಗಳು ನಿರಂತರ ಮುಂದುವರೆಯಲಿ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಜಿತೊ ಅಪೆಕ್ಸ್ ನಿರ್ದೇಶಕ ಸತೀಶ ಮೆಹತಾ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿ ಮಾತನಾಡಿ, ಜಿತೋ ಸಂಸ್ಥೆಯ ವತಿಯಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಲಾದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕೆ.ಕೆ.ಜಿ ಝೋನ ಕಾರ್ಯದರ್ಶಿ ವಿಕ್ರಮ ಜೈನ ಅವರು ಮಾತನಾಡಿ, ಕರ್ನಾಟಕ, ಕೇರಳ ಮತ್ತು ಗೋವಾ ರಾಜ್ಯಗಳಲ್ಲಿನ ಕಾರ್ಯಚಟುವಿಕೆಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಜಿತೋ ಸಂಸ್ಥೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚಳ ಮಾಡುವಲ್ಲಿ ಎಲ್ಲ ಸದಸ್ಯರು ಶ್ರಮಿಸಬೇಕೆಂದರು.

೨೦೨೦-೨೧ ನೇ ಸಾಲಿನಲ್ಲಿ ಜಿತೋ ಸಂಸ್ಥೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ವಿಕ್ರಮ ಜೈನ ಅವರಿಗೆ ಜಿತೋ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ದೀಪಕ ಧಡೂತಿ, ಶ್ರೀಮತಿ ಧಡೂತಿ, ಸತೀಶ ಮೆಹತಾ, ಸುನಿಲ ಕಟಾರಿಯಾ, ಅಂಕಿತ ಖೋಡಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ೨೦೨೦-೨೧ ನೇ ಸಾಲಿನಲ್ಲಿ ಸಂಸ್ಥೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ವಿಕ್ರಮ ಜೈನ ಅವರಿಗೆ ಜಿತೋ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉದ್ಯಮಿ ಗೋಪಾಲ ಜಿನಗೌಡ ಮತ್ತು ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೊಡ್ಡಣ್ಣವರ ಅವರು ಅಲ್ಪಸಂಖ್ಯಾತರ ಯೋಜನೆಗಳ ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಸುನಿಲ ಕಟಾರಿಯಾ ಅತಿಥಿಗಳನ್ನು ಸ್ವಾಗತಿಸಿ ತಮ್ಮ ಆಡಳಿತಾವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಅಂಕಿತ ಖೋಡಾ ತಮ್ಮ ಆಡಳಿತಾವಧಿಯಲ್ಲಿ ಕಾರ್ಯರೂಪಕ್ಕೆ ತರಲಾದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಜಿತೋ ಸಂಸ್ಥೆಯ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳು ಅಧಿಕಾರದ ಪದಗ್ರಹಣ ಸ್ವೀಕರಿಸಿದರು.

ಸಮಾರಂಭದಲ್ಲಿ ಜಿತೋ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಪುಷ್ಪಕ ಹನಮಣ್ಣವರ , ಪ್ರಧಾನ ಕಾರ್ಯದರ್ಶಿಯಾಗಿ ಅಮಿತ ದೋಷಿ, ಖಜಾಂಚಿಯಾಗಿ ಅಭಿಷೇಕ ಮಿರ್ಜಿ, ಉಪಾಧ್ಯಕ್ಷರಾಗಿ ಮುಕೇಶ ಪೋರವಾಲ, ವೀರಧವಲ ಉಪಾಧ್ಯೆ, ಕಾರ್ಯದರ್ಶಿಯಾಗಿ ನಿತೀನ ಪೋರವಾಲ, ವಿಜಯಕುಮಾರ ಪಾಟೀಲ, ಜಂಟಿ ಖಜಾಂಚಿಯಾಗಿ ಆಕಾಶ ಪಾಟೀಲ, ಮತ್ತು ಸದಸ್ಯರಾಗಿ ಮಹೇಂದ್ರ ಪರಮಾರ, ಮತ್ತು ನಿತೀನ ಚಿಪ್ರೆ ಇವರು ಅಧಿಕಾರ ಸ್ವೀಕರಿಸಿದರು.
ಪ್ರಧಾನ ಕಾರ್ಯದರ್ಶಿ ಅಮಿತ ದೋಷಿ ಅವರು ಮಾತನಾಡಿ, ಮುಂಬರುವ ೨೦೨೧-೨೨ ನೇ ಸಾಲಿನಲ್ಲಿ ಕೈಗೊಳ್ಳಲಾಗುವ ಯೋಜನೆಗಳನ್ನು ಮಾಹಿತಿ ನೀಡಿ ಕೊನೆಯಲ್ಲಿ ವಂದಿಸಿದರು. ಪ್ರಾರಂಭದಲ್ಲಿ ನಮೋಕಾರ ಮಂತ್ರಪಠಣದಿಂದ ಕಾರ್ಯಕ್ರಮವನ್ನು ಆರಂಭಿಸಲಾಯಿತು. ದೀಪಕ ಧಡೂತಿ, ಪ್ರಮೋದ ಪಾಟೀಲ, ಡಾ. ಗೋಮಟೇಶ ಕುಸನಾಳೆ ಇವರು ಅತಿಥಿಗಳನ್ನು ಪರಿಚಯಿಸಿದರು. ಭೂವಿ ಪೋರವಾಲ ಕಾರ್ಯಕ್ರಮ ನಿರೂಪಿಸಿದರು.

ಜೀತೋ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button