ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ ೨೨೦/೧೧೦/೧೧ ಕೆವ್ಹಿ ವಿದ್ಯುತ್ ಕೇಂದ್ರದಿಂದ ಹಾಲಿ ಚಾಲ್ತಿಯಲ್ಲಿರುವ ೧೧೦ ಕೆ.ವಿ. ಇಟ್ನಾಳ (ಹಿಡಕಲ)-ಸುಲ್ತಾನಪುರ ಜೋಡಿ ಮಾರ್ಗದಿಂದ ಬಹುಪ್ರಸರಣ ಮಾರ್ಗದ ಗೋಪುರಗಳ ಮೇಲೆ ೨೭.೮೪೮ ಕಿಮೀ ಜೋಡಿ ಮಾರ್ಗವನ್ನು ನಿರ್ಮಿಸಲಾಗಿದೆ.
ಈ ೧೧೦ಕೆವ್ಹಿ ವಿದ್ಯುತ್ ಪ್ರಸರಣ ಮಾರ್ಗವು ಮೀರಾಪುರಹಟ್ಟಿ, ಭೆಂಡವಾಡ, ಕಟಕಭಾವಿ, ದೇವಾಪುರಹಟ್ಟಿ, ಸವಸುದ್ದಿ, ಇಟ್ನಾಳ, ಮುಗಳಖೋಡ ಹಾಗೂ ಅಕ್ಕ ಪಕ್ಕದ ಗ್ರಾಮಗಳ ಸರಹದ್ದಿನ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಹಾಯ್ದು ಹೋಗುತ್ತದೆ.
ಈ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಅ.೧೬ ರಂದು ಇಲ್ಲವೆ ತದನಂತರ ಯಾವುದೇ ಕ್ಷಣದಲ್ಲಿ ವಿದ್ಯುತ್ತನ್ನು ಹರಿಬಿಡಲಾಗುವುದು. ಆದ್ದರಿಂದ ವಿದ್ಯುತ್ ಗೋಪುರಗಳನ್ನು ಹತ್ತುವುದು ಅಥವಾ ತಂತಿಗಳನ್ನು ಮುಟ್ಟುವುದು, ಹಸಿರು ಟೊಂಗೆಗಳನ್ನು ಎಸೆಯುವುದು ಮತ್ತು ಲೈನ್ ಕೆಳಗಡೆ ದನಕರುಗಳನ್ನು ಕಟ್ಟುವುದು, ಗಿಡಮರಗಳನ್ನು ನೆಡುವುದು, ಮನೆ/ಗುಡಿಸಲುಗಳನ್ನು ನಿರ್ಮಿಸುವುದು ಪ್ರಾಣಕ್ಕೆ ಅಪಾಯಕಾರಿಯಾಗಬಹುದು.
ಆದಕಾರಣ ಸಾರ್ವಜನಿಕರು ಮೇಲ್ಕಾಣ ಸಿದ ಚಟುವಟಿಕೆಗಳನ್ನು ಮಾಡಬಾರದೆಂದು ತಿಳಿಸಲಾಗಿದೆ. ಒಂದು ವೇಳೆ ಇಂತಹ ಕೃತ್ಯಗಳನ್ನು ಯಾರಾದರೂ ಎಸಗಿದಲ್ಲಿ ಮುಂದೆ ಒದಗಬಹುದಾದ ಅಪಾಯಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರು (ವಿ), ಬೃಹತ್ ಕಾಮಗಾರಿ ವಿಭಾಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಈ ಸಮಸ್ಯೆ…
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ