Kannada NewsKarnataka News

ವಿದ್ಯುತ್ ಸ್ಪರ್ಶಿಸಿ ರೈತ ಸಾವು

ಪ್ರಗತಿವಾಹಿನಿ ಸುದ್ದಿ, ಖಾನಾಪುರ:  ಮೇವು ತರಲು ಹೊಲಕ್ಕೆ ತೆರಳಿದ್ದ ರೈತರೊಬ್ಬರು ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಸ್ಪರ್ಶಿಸಿ ಮೃತಪಟ್ಟ ಘಟನೆ ತಾಲೂಕಿನ ಕೊಡಚವಾಡ ಗ್ರಾಪಂ ವ್ಯಾಪ್ತಿಯ ಚಿಕದಿನಕೊಪ್ಪ ಗ್ರಾಮದಲ್ಲಿ ಮಂಗಳವಾರ ವರದಿಯಾಗಿದೆ.

ಮೃತರನ್ನು ಮಹಾವೀರ ಮಲ್ಲಣ್ಣವರ (೫೫) ಎಂದು ಗುರುತಿಸಲಾಗಿದೆ. ಇವರು ಜಾನುವಾರುಗಳಿಗೆ ಮೇವು ತರುವ ಸಲುವಾಗಿ ತಮ್ಮ ಜಮೀನಿಗೆ ತೆರಳಿದ್ದರು. ಮಾರ್ಗಮಧ್ಯದಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಾಗ ವಿದ್ಯುತ್ ಸ್ಪರ್ಶಿಸಿದ್ದರಿಂದ ಸ್ಥಳದಲ್ಲೇ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.

Home add -Advt

ಈ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೋಡಿ ಗೋಪುರಗಳ ಮೇಲೆ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ : ಸಾರ್ವಜನಿಕರಿಗೆ ಎಚ್ಚರಿಕೆ

Related Articles

Back to top button