ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗೈನೈಜೇಶನ್ (ಜೀತೋ) ಸಂಸ್ಥೆಯ ೨೦೧೯-೨೦೨೦ ನೇ ಸಾಲಿನ ಬೆಳಗಾವಿ ವಿಭಾಗದ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಗಿದೆ. ಮಂಗಳವಾರ ಅಂಗಡಿ ಮಹಾವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರದ ಪದಗ್ರಹಣ ಮಾಡಿದರು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಮನೋಜ ಸಂಚೇತಿ, ಉಪಾಧ್ಯಕ್ಷರಾಗಿ ಸುನಿಲ ಕಟಾರಿಯಾ ಮತ್ತು ಪುಷ್ಪಕ ಹನಮಣ್ಣವರ, ಕಾರ್ಯದರ್ಶಿಯಾಗಿ ವಿಕ್ರಮ ಜೈನ, ಸಹ ಕಾರ್ಯದರ್ಶಿಯಾಗಿ ಅಂಕಿತ ಖೋಡಾ, ಖಜಾಂಚಿಯಾಗಿ ಜಯಕುಮಾರ ಪಾಟೀಲ, ಸಹ ಖಜಾಂಚಿ ವೀರಧವಲ ಉಪಾಧ್ಯೆ, ಸಲಹಾ ಸದಸ್ಯರಾಗಿ ಸತೀಶ ಶಹಾ ಅಧಿಕಾರ ವಹಿಸಿಕೊಂಡರು.
ಜೀತೋ ಬೆಳಗಾವಿ ವಿಭಾಗದ ವತಿಯಿಂದ ನಡೆಸಲಾಗುವ ವಿವಿಧ ಯೋಜನೆಗಳ ಅಧ್ಯಕ್ಷರು ಸಹ ಅಧಿಕಾರ ಸ್ವೀಕರಿಸಿದರು. ಅಲ್ಪಸಂಖ್ಯಾತ ಮತ್ತು ಸದಸ್ಯರ ನೋಂದಣಿ ವಿಭಾಗ ಪುಷ್ಪಕ ಹನಮಣ್ಣವರ, ಜೆಎಟಿಎಫ್ ಮಹೇಂದ್ರ ಪರಮಾರ, ಬೀಟ ಅಭಿಜೀತ ಭೋಜಣ್ಣವರ, ಜೆಬಿಎನ್ ಸಂತೋಷ ಪೋರವಾಲ, ಶ್ರಮಣ ಆರೋಗ್ಯ ಅಶೋಕ ಜೈನ, ಕಾರ್ಯಾಗಾರ ಆಯೋಜನೆ ಸ್ವಪ್ನಿಲ ಶಹಾ, ಜೀತೋ ಗೇಮ್ಸ ಸಂಜೀವ ಭಂಡಾರಿ, ಜೀತೋ ಯುಥ ವಿಂಗ ಮುಕೇಶ ಪೋರವಾಲ, ಜೆಬಿಎನ್ ಗ್ಲೋಬಲ್ ಕಾರ್ಡ ನರೇಂದ್ರ ಗಾಡಿಯಾ, ಜೀತೋ ಮಹಿಳಾ ವಿಭಾಗ ಸಂಜೀವ ದೊಡ್ಡಣ್ಣವರ, ಆರೋಗ್ಯ ವಿಭಾಗ ಪ್ರವೀಣ ಸಾಮಸುಖ ಮತ್ತು ಹರ್ಷವರ್ಧನ ಇಂಚಲ, ಫೌಂಡೇಶನ ಡೆ ಲಲಿತ ಜೈನ ಮತ್ತು ಮೀಡಿಯಾ ಸೆಲ್ ರಾಹುಲ ಹಜಾರೆ ಅಧಿಕಾರ ಪದಗ್ರಹಣ ಮಾಡಿದರು.
ಕರ್ನಾಟಕ, ಕೇರಳ ಮತ್ತು ಗೋವಾ ಝೋನ್ ಅಧ್ಯಕ್ಷ ಓಂಪ್ರಕಾಶ ಜೈನ ಎಲ್ಲ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಸಂಸ್ಥೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ೧೪ ಹೊಸ ಪಾಟರ್ನ ಸದಸ್ಯರು ಅಧಿಕಾರ ಸ್ವೀಕರಿಸಿದರು.
೨೦೧೮-೧೯ ಸಾಲಿನಲ್ಲಿ ಸಂಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಭಿಜೀತ ಭೋಜಣ್ಣವರ ಅವರಿಗೆ ಜೀತೋ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೀತೋ ಅಪೆಕ್ಸ ವಿಭಾಗದ ಹಿಮ್ಮತ ಜೈನ, ಪ್ರವೀಣ ಭಾಪನಾ, ಲಲೀತ ಜೈನ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಸತೀಶ ಶಹಾ ಸ್ವಾಗತಿಸಿದರು. ವಿಕ್ರಮ ಜೈನ ವಂದಿಸಿದರು. ಅನುಜಾ ಪ್ರಕಾಶ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ