Belagavi NewsBelgaum NewsKannada NewsKarnataka NewsLatestNational

*ಈ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆ: ಪ್ರಯಾಣಿಕರಿಗೆ ಅನುಕೂಲ*

ಪ್ರಗತಿವಾಹಿನಿ ಸುದ್ದಿ: ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಸಂಚರಿಸುವ ದಾದರ್ ಹಾಗೂ ವಿಜಯವಾಡ ಎಕ್ಸ್ ಪ್ರೆಸ್ ರೈಲುಗಳ ಬೋಗಿಗಳನ್ನು ಹೆಚ್ಚಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಇನ್ಮುಂದೆ ಈ ಎರಡೂ ರೈಲುಗಳು ತಲಾ 17 ಬೋಗಿಗಳೊಂದಿಗೆ ಸಂಚರಿಸಲಿವೆ. 

ಹುಬ್ಬಳ್ಳಿ-ದಾದರ್-ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ (17317/17318)

ಪ್ರಸ್ತುತ 15 ಬೋಗಿಗಳೊಂದಿಗೆ ಸಂಚರಿಸುತ್ತಿರುವ ಈ ರೈಲಿಗೆ ಎರಡು ಹೆಚ್ಚುವರಿ ‘ಎಸಿ 3-ಟೈರ್’ ಬೋಗಿಗಳನ್ನು ಸೇರ್ಪಡೆಗೊಳಿಸಲಾಗುವುದು. ಈ ಬದಲಾವಣೆಯು ಹುಬ್ಬಳ್ಳಿಯಿಂದ 2026ರ ಜನವರಿ 3 ರಿಂದ ಹಾಗೂ ದಾದರ್ನಿಂದ ಜನೆವರಿ 4 ರಿಂದ ಜಾರಿಗೆ ಬರಲಿದೆ. 

ಹುಬ್ಬಳ್ಳಿ–ವಿಜಯವಾಡ-ಹುಬ್ಬಳ್ಳಿ ರೈಲು (17329/17330)

ಪ್ರಸ್ತುತ 16 ಬೋಗಿಗಳೊಂದಿಗೆ ಸಂಚರಿಸುತ್ತಿದ್ದ ಈ ರೈಲಿಗೆ ಒಂದು ಹೆಚ್ಚುವರಿ ‘ಸ್ಲೀಪರ್’ ಬೋಗಿಯನ್ನು ಸೇರಿಸಲಾಗುವುದು. ಹುಬ್ಬಳ್ಳಿಯಿಂದ 2026ರ ಜನವರಿ 5 ರಿಂದ ಹಾಗೂ ವಿಜಯವಾಡದಿಂದ ಜನವರಿ 6 ರಿಂದ ಪರಿಷ್ಕೃತ ಬೋಗಿಗಳೊಂದಿಗೆ ಸಂಚರಿಸಲಿದೆ.

ಪರಿಷ್ಕೃತ ಬೋಗಿಗಳ ವಿವರ

ಎರಡೂ ರೈಲುಗಳಲ್ಲಿ ತಲಾ ಒಂದು ಎಸಿ 2-ಟೈರ್, ಮೂರು ಎಸಿ 3-ಟೈರ್, ಏಳು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ಎರಡು ಎಸ್ಎಲ್ಆರ್ ಬೋಗಿಗಳು ಸೇರಿ ಒಟ್ಟು 17 ಬೋಗಿಗಳು ಇರಲಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button