Kannada NewsKarnataka News

​ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿ ಚೆಕ್ ಹಸ್ತಾಂತರ

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ನೂತನ ಸಮುದಾಯ ಭವನ ಕಟ್ಟಡದ ನಿರ್ಮಾಣದ ಸಲುವಾಗಿ ಲಕ್ಷ್ಮಿ ಹೆಬ್ಬಾಳಕರ್ ಅವರ ಶಾಸಕರ (MLA Fund) ಅನುದಾನದ ವತಿಯಿಂದ 7 ಲಕ್ಷ ರೂ. ಕೊಡಲಾಗುತ್ತಿದ್ದು, ಈ ಪೈಕಿ ಮೊದಲನೇ ಕಂತಿನಲ್ಲಿ 3.90 ಲಕ್ಷ ರೂ.ಗಳ ಚೆಕ್ ನ್ನು ಗುರುವಾರ  ದೇವಸ್ಥಾನ ಕಮೀಟಿಯವರಿಗೆ ಹಸ್ತಾಂತರಿಸಲಾಯಿತು.
ಲಕ್ಷ್ಮಿ ಹೆಬ್ಬಾಳಕರ್ ಅವರ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು, ಸಿದ್ದಬಸವ ಮನತುರಗಿಮಠ, ಶ್ರೀಶೈಲ ಶಾಸ್ತ್ರೀ ಹಿರೇಮಠ, ನಾಗಯ್ಯ ಕುಡಚಿಮಠ, ವಿಶ್ವನಾಥ ಹೆಬ್ಬಳ್ಳಿ, ನಾಗರಾಜ ಬೆಳಗಾವಿ, ರಾಜು ಹಂಪಿಹೊಳಿ, ಶಶಿಧರ್ ಕುಡಚಿಮಠ, ವಿನಾಯಕ ಅಂಕಲಗಿ, ದಯಾನಂದ ಸಂಬರ್ಗಿಮಠ ​  ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button