Kannada NewsKarnataka NewsLatest

ಪೋಲಿಸ್ ಕಾನ್ಸಟೇಬಲ್ ಪರೀಕ್ಷೆಗೆ ಹೆಚ್ಚುವರಿ ಬಸ್ ವ್ಯವಸ್ಥೆ; ಇಲ್ಲಿದೆ ಲಿಂಕ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅಕ್ಟೊಬರ್ ೨೪, ರವಿವಾರದಂದು ರಾಜ್ಯಾದ್ಯಂತ ನಡೆಯುವ ಪೋಲಿಸ್ ಕಾನ್ಸಟೇಬಲ್(ಸಿವಿಲ್) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರಗಳನ್ನು ತಲುಪಲು ಹಾಗೂ ಮರಳಿ ಸ್ವ-ಸ್ಥಳಗಳಿಗೆ ಹಿಂದಿರುಗಲು ಹೆಚ್ಚುವರಿ ಬಸ್ ಸೌಲಭ್ಯ ಕಾರ್ಯಾಚರಣೆ ಗೊಳಿಸಲಾಗಿದೆ.

ಶುಕ್ರವಾರದಿಂದ ಚನ್ನಮ್ಮನ ಕಿತ್ತೂರು ಉತ್ಸವ – 2021 ; ಇಲ್ಲಿದೆ ಸಮಗ್ರ ವಿವರ

ಅಕ್ಟೋಬರ ೨೩ ಹಾಗೂ ೨೪ ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟ ವಿಭಾಗಗಳ ಪ್ರಮುಖ ಬಸ್ ನಿಲ್ದಾಣಗಳಿಂದ, ಪರೀಕ್ಷೆಗಳು ನಡೆಯುವ ಕೇಂದ್ರಗಳಾದ ಕಾರವಾರ, ಉಡುಪಿ, ಮಂಗಳೂರು, ಮೂಡಬಿದ್ರೆ, ಹಾಗೂ ಇನ್ನಿತರ ಜಿಲ್ಲಾ ಕೇಂದ್ರಗಳಿಗೆ ಅವಶ್ಯಕತೆ ಹಾಗೂ ಬೇಡಿಕೆಗಳಿಗನುಗುಣವಾಗಿ ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ.

ಈ ಸ್ಮಾರ್ಟ್ ಫೋನ್ ಗಳಲ್ಲಿ ಬಂದ್ ಆಗಲಿದೆ ವಾಟ್ಸಪ್…!

ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಮುಂಗಡ ಟಿಕೇಟ್‌ಗಳನ್ನು ksrtc mobile app ಅಥವಾ http://ksrtc.karnataka.gov.in ವೆಬ್‌ಸೈಟ್‌ನಲ್ಲಿ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಸುಗಮ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿಯೇ, ಪ್ರಯಾಣಿಸುವಂತೆ ಮತ್ತು ಸದರಿ ವಿಶೇಷ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಕ್ಷಣ ಕೋವಿಡ್ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಪಡೆಯುವುದು ಹೇಗೆ? – Instant Covid Vaccination Certificate

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button