ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗುಂದಿ ಗ್ರಾಮದಲ್ಲಿ ಶ್ರೀ ಬ್ರಹ್ಮಲಿಂಗ ಯುವಕ ಮಂಡಳದ ವತಿಯಿಂದ ಏರ್ಪಡಿಸಲಾಗಿದ್ದ ಎತ್ತಿನಗಾಡಿಯ ಭವ್ಯ ಜಂಗೀ ಶರ್ಯತ್ ಕಾರ್ಯಕ್ರಮವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಬ್ಬಾಳಕರ್, ಗ್ರಾಮೀಣ ಜನರು ಜನಪದ ಕ್ರೀಡೆ, ಸಂಸ್ಕೃತಿಗಳನ್ನು ಉಳಿಸಿ, ಮುನ್ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
ಎತ್ತಿನಗಾಡಿ ಶರ್ಯತ್ತು ಅತ್ಯಂತ ಪ್ರಾಚೀನ ಕ್ರೀಡೆಗಳಲ್ಲೊಂದು. ವರ್ಷವಿಡೀ ಶ್ರಮದಲ್ಲೇ ಕಳೆಯುವ ಗ್ರಾಮೀಣ ಜನರು ಇಂತಹ ಕ್ರೀಡೆಗಳಿಂದ ಮನರಂಜನೆ, ಮಾನಸಿಕ ನೆಮ್ಮದಿ ಕಂಡುಕೊಳ್ಳುತ್ತಾರೆ. ಆದರೆ ಎಲ್ಲ ಮುನ್ನೆಚ್ಚರಿಕೆಯೊಂದಿಗೆ ಇದನ್ನು ನಡೆಸಬೇಕು ಎಂದು ಹೆಬ್ಬಾಳಕರ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು, ಯುವರಾಜ ಕದಂ, ಭದ್ರಾವತಿಯ ಮುಖಂಡರಾದ ಬಿ. ಕೆ. ಶಿವಕುಮಾರ, ಯಲ್ಲಪ್ಪ ದೇಕೋಳಕರ್, ಬಾಳು ದೇಸೂರಕರ್, ಮೃಣಾಲ್ ಹೆಬ್ಬಾಳಕರ್, ಲಕ್ಷ್ಮಣ ಪಾಟೀಲ, ಪುಂಡಲೀಕ ಜಾಧವ್, ದತ್ತಾ ಪಾಟೀಲ, ಅರವಿಂದ ಪಾಟೀಲ, ಜಯವಂತ ಬಾಳೇಕುಂದ್ರಿ, ಶಿವಾಜಿ ಮಂಡೋಳಕರ್, ಬ್ರಹಲಿಂಗ ಯುವಕ ಮಂಡಳದ ಪದಾಧಿಕಾರಿಗಳು, ಗ್ರಾಮದ ಜನರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ