
ಪ್ರಗತಿವಾಹಿನಿ ಸುದ್ದಿ, ಗೋಕಾಕ – ಯುವ ಸಾಹಿತಿ ವಿದ್ಯಾ ರೆಡ್ಡಿ ಇವರ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳ ಸೇವೆಯನ್ನು ಗುರುತಿಸಿ ಬೆಳಗಾವಿಯ ಸಪ್ತ ಸ್ವರ ಸಂಗೀತ ಕಲಾ ಬಳಗವು ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಿದೆ.
ಅಕ್ಟೋಬರ್ 31 ರಂದು ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ನಡೆಯಲಿದೆ. ಬೈಲಹೊಂಗಲ ಆರಾಧ್ಯಮಠದ ವೇದಮೂರ್ತಿ ಡಾ. ಮಹಾಂತೇಶ ಶಾಸ್ತ್ರಿಗಳು ಹಾಗೂ ಮಲ್ಲಮ್ಮನ ಬೆಳವಡಿಯ ವೇದಮೂರ್ತಿ ಬಸಯ್ಯಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಬೆಳಗಾವಿ ಲೋಕಸಭಾ ಸದಸ್ಯೆ ಮಂಗಳಾ ಅಂಗಡಿ ಹಾಗೂ ಕೆಪಿಸಿಸಿ ಅಧ್ಯಕ್ಷ ಮತ್ತು ಯಮಕನಮರ್ಡಿ ಶಾಸಕ ಸತೀಶ್ ಜಾರಕಿಹೊಳಿ ಅವರು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ