
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ಪ್ರಜಾ ದರ್ಶನ ಹಾಗೂ ಕನ್ನಡ ಮಾಸ ಪತ್ರಿಕೆಯ ಸಂಯುಕ್ತಾಶ್ರಯದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಅಂದರ ಜೀವ ಬೆಳಕು ಸಂಸ್ಥೆ ಸಂಸ್ಥಾಪಕರಾದ ನಾಗನಗೌಡ ಬೆಳ್ಳುಳ್ಳಿ ಅವರ ಸಮಾಜ ಸೇವೆಯನ್ನು ಗುರುತಿಸಿ “ಸಮಾಜ ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗನಗೌಡ ಬೆಳ್ಳುಳ್ಳಿ ಅವರು ಈ ಪುರಸ್ಕಾರವು ಸಾರ್ವಜನಿಕರ ಪ್ರೀತಿ ಆಶಿರ್ವಾದ ಸಹಕಾರ ಸಹಾಯ ಅವರು ನೀಡಿರುವ ಬೆಂಬಲದಿಂದ ಸಿಕ್ಕಿದೆ ಹಾಗೂ ಪ್ರಮುಖವಾಗಿ ರಾಣೆಬೆನ್ನೂರಿನ ಮಹಾಜನತೆಯು ನನ್ನ ಕಷ್ಟ ಸಂದರ್ಭದಲ್ಲಿ ಪರಿಪಾಲಿಸಿ ನನ್ನನ್ನು ಬೆಳೆಸಲು ಪ್ರಯತ್ನಿಸಿದ್ದಾರೆ ತಮ್ಮೆಲ್ಲರಿಗೂ ನಾನು ಪ್ರೀತಿಪೂರ್ವಕವಾಗಿ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವದರ್ಶನ ಕನ್ನಡ ದಿನಪತ್ರಿಕೆ ಸಂಪಾದಕ ಎಸ್ ಎಸ್ ಪಾಟೀಲ್ ವಹಿಸಿದ್ದರು. ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾಕ್ಟರ್ ಮಹದೇವ್ ಸಮಾರಂಭ ಉದ್ಘಾಟಿಸಿದರು. ಹುಬ್ಬಳ್ಳಿಯ ನವನಗರ ಶಾಖಾಮಠದ ಪರಮಪೂಜ್ಯ ಶ್ರೀ ಸಿದ್ಧರಾಮ ಶಿವಯೋಗಿಗಳು, ಗಜೇಂದ್ರಗಡ ಕಾಲಜ್ಞಾನ ಮಠದ ಶ್ರೀ ಕಾಲಜ್ಞಾನಿ ಬ್ರಹ್ಮ ಸದ್ಗುರು ಶ್ರೀ ಶರಣಬಸವ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿ ಓದಿ ಅಂಧ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ಸಹಾಯ