Kannada NewsKarnataka NewsLatest

ಬೆಳಗಾವಿ ಅಧಿವೇಶನ : ನಾಳೆಯೇ ದಿನಾಂಕ ಪ್ರಕಟ; ಮಧ್ಯಾಹ್ನ ಹೊರಟ್ಟಿ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು /ಬೆಳಗಾವಿ – ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸರಕಾರ ನಿರ್ಧರಿಸಿದ್ದು, ಸೋಮವಾರ ಬೆಳಗ್ಗೆ ಅಧಿವೇಶನದ ದಿನಾಂಕ ನಿರ್ಧಾರವಾಗಲಿದೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ರಾಜ್ಯ ಸಚಿವಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಅಧಿವೇಶನದ ದಿನಾಂಕ ಮತ್ತು ಎಷ್ಟು ದಿನ ಅಧಿವೇಶನ ನಡೆಯಲಿದೆ ಎನ್ನುವ ಕುರಿತು ನಿರ್ಧಾರವಾಗಲಿದೆ.

ಡಿಸೆಂಬರ್ 2ನೇ ವಾರ ಅಧಿವೇಶನ ನಡೆಯುವ ಸಾಧ್ಯತೆ ಹೆಚ್ಚಾಗಿದೆ. 2 ವಾರ ಕಾಲ ಅಧಿವೇಶನ ನಡೆಯಬಹುದು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾದ ನಂತರ ಬೆಳಗಾವಿಯಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆದಿರಲಿಲ್ಲ.

ಹೊರಟ್ಟಿ ಭೇಟಿ

ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲದ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ನಡೆಸಲು ಸರ್ಕಾರ ಉದ್ದೇಶಿಸಿರುವ ಹಿನ್ನಲೆಯಲ್ಲಿ, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನವನ್ನು ಪ್ರಥಮ ಬಾರಿಗೆ ವೆಬ್ ಕಾಸ್ಟಿಂಗ್ ಮೂಲಕ ನೇರ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಅಗತ್ಯವಾಗಿರುವ ಪೂರ್ವಭಾವಿ ಸಿದ್ದತೆಗಳ ಪರಿಶೀಲನೆಗಾಗಿ ವಿಧಾನ ಪರಿಷತ್ ಸಭಾಪತಿ   ಬಸವರಾಜ ಹೊರಟ್ಟಿ, ಸೋಮವಾರ ಮಧ್ಯಾಹ್ನ  ೧೨.೩೦ ಘಂಟೆಗೆ,  ಬೆಳಗಾವಿ  ಸುವರ್ಣ  ಸೌಧಕ್ಕೆ  ಆಗಮಿಸಲಿದ್ದಾರೆ.  ಈ ವೇಳೆ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ಬೆಳಗಾವಿ ಅಧಿವೇಶನ ದಿನಾಂಕ ನ.8ರಂದು ತೀರ್ಮಾನ -ಸಿಎಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button