ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಬ್ಬದ ಸಂಭ್ರಮದಲ್ಲಿದ್ದ ಮಕ್ಕಳಿಬ್ಬರು ಕೆರೆಯಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ.
ಬೆಳಗಾವಿ ಸಮೀಪ ಸಾಂಬ್ರಾದಲ್ಲಿ ಭಾನುವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದೆ. ದೀಪಾವಳಿ ತ್ಯಾಜ್ಯ ವಿಸರ್ಜನೆಗೆಂದು ಕೆರೆಗೆ ತೆರಳಿದ್ದ ಮೂವರು ಸಹೋದರಿಯರು ನೀರಿಗೆ ಬಿದ್ದಿದ್ದು, ಓರ್ವ ಬಾಲಕಿ ಅದೃಷ್ಟವಶಾತ್ ಬದುಕುಳಿದಿದ್ದಾಳೆ. ಆದರೆ ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮೃತರಾಗಿದ್ದಾರೆ.
8 ವರ್ಷದ ನೇತ್ರಾ ಈರಣ್ಣ ಕೊಳವಿ ಹಾಗೂ 6 ವರ್ಷದ ಪ್ರಿಯಾ ಈರಣ್ಣ ಕೊಳವಿ ಮೃತರು. ಸಂಧ್ಯಾ ಎನ್ನುವ ಬಾಲಕಿ ಬದುಕುಳಿದಿದ್ದಾಳೆ.
ಮೂವರೂ ಮಕ್ಕಳು ತ್ಯಾಜ್ಯ ವಿಸರ್ಜನೆ ವೇಳೆ ನೀರಿಗೆ ಬಿದ್ದಿದ್ದಾರೆ. ಅಕ್ಕಪಕ್ಕದವರು ನೋಡಿ ತಕ್ಷಣವೇ ಅವರೆಲ್ಲರನ್ನೂ ಮೇಲಕ್ಕೆತ್ತಿದ್ದಾರೆ. ಆದರೆ ಓರ್ವ ಬಾಲಕಿ ಮಾತ್ರ ಬದುಕಿದಳು.
ತಂದೆ ಮಿಲ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದು, ದೀಪಾವಳಿಗೆ ಬಂದವರು ಹಬ್ಬ ಮುಗಿಸಿ ನಿನ್ನೆಯಷ್ಟೆ ಕರ್ತವ್ಯಕ್ಕೆ ಮರಳಿದ್ದರು. ಮಕ್ಕಳು ಸಾಂಬ್ರಾ ಕೇಂದ್ರೀಯ ವಿದ್ಯಾಲಯದಲ್ಲಿ 1 ಮತ್ತು 3ನೇ ತರಗತಿಯಲ್ಲಿ ಓದುತ್ತಿದ್ದರು.
ಬೆಳಗಾವಿ ಅಧಿವೇಶನ : ನಾಳೆಯೇ ದಿನಾಂಕ ಪ್ರಕಟ; ಮಧ್ಯಾಹ್ನ ಹೊರಟ್ಟಿ ಭೇಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ