Latest

ಬರಿಗಾಲಲ್ಲಿ ಬಂದು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೆಕಾಳ ಹಾಜಬ್ಬ; ಡಾ.ವಿಜಯ ಸಂಕೇಶ್ವರ ಸೇರಿ 119 ಜನರಿಗೆ ಪದ್ಮ ಪ್ರಶಸ್ತಿ ಪ್ರದಾನ

 

ಡಾ.ವಿಜಯ ಸಂಕೇಶ್ವರ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಕ್ಷರ ಸಂತ ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹರೆಕಾಳ ಹಾಜಬ್ಬ ಬರಿಗಾಲಲ್ಲಿ ಬಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಅನಕ್ಷರಸ್ಥರಾಗಿದ್ದರೂ ಕೂಡ ಬೀದಿ ಬದಿಯಲ್ಲಿ ಕಿತ್ತಲೆ ಹಣ್ಣು ವ್ಯಾಪಾರ ಮಾಡುತ್ತ ಸ್ವಂತ ದುಡಿಮೆಯಲ್ಲಿ ಶಾಲೆ ಕಟ್ಟಿದ ಹಳೆಕಾಳ ಹಾಜಬ್ಬ ಅವರಿಂದ ನೂರಾರು ಮಕ್ಕಳು ಶಿಕ್ಷಣ ಪಡೆದಿದ್ದು, ಹಾಜಬ್ಬ ಸಾಧನೆಗೆ 2020ರ ಪ್ರತಿಷ್ಠಿತ ಪದ್ಮ ಪುರಸ್ಕಾರ ಸಿಕ್ಕಿದೆ. ಇಂದು ನಡೆದ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬರಿಗಾಲಲ್ಲಿ ನಡೆದು ಬಂದ ಹಾಜಬ್ಬರನ್ನು ಕಂಡು ಕ್ಷಣ ಕಾಲ ಅಚ್ಚರಿಗೊಳಗಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು.

Home add -Advt

ಇದೇ ವೇಳೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಗುಜರಾತ್ ಮಾಜಿ ಸಿಎಂ ಕೇಶು ಭಾಯ್ ಪಟೇಲ್, ಮಾಜಿ ಕೇಂದ್ರ ಸಚಿವರಾದ ದಿ.ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಈಬಾರಿ 10 ಸಾಧಕರಿಗೆ ಪದ್ಮಭೂಷಣ ಹಾಗೂ ಗಾಯಕ ದಿ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಉಡುಪಿ ಖ್ಯಾತ ವೈದ್ಯ ಡಾ.ಬೆಳ್ಳೆ ಮೋನಪ್ಪ ಹೆಗ್ಡೆ ಸೇರಿದಂತೆ 7 ಸಾಧಕರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾರಿಗೆ ಕ್ಷೇತ್ರದ ದಿಗ್ಗಜ ಡಾ. ವಿಜಯ ಸಂಕೇಶ್ವರ, ಶಿಕ್ಷಣ ವಿಭಾಗದಲ್ಲಿ ಆರ್.ಲಕ್ಷ್ಮಿನಾರಾಯಣ ಕಶ್ಯಪ್, ಕಲೆಯಲ್ಲಿ ಬಿ.ಮಂಜಮ್ಮ, ಕ್ರೀಡಾವಿಭಾಗದಲ್ಲಿ ಕೆ.ವೈ.ವೆಂಕಟೇಶ್, ನಟಿ ಕಂಗನಾ ರಣಾವತ್, ರಾಣಿ ರಾಂಪಾಲ್, ಪಿ.ವಿ.ಸಿಂಧು ಸೇರಿದಂತೆ 119 ಸಾಧಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಿದರು.

ಪುನೀತ್ ಗೆ ಚಿಕಿತ್ಸೆ ನೀಡಿದ್ದ ಡಾ.ರಮಣ್ ರಾವ್ ವಿರುದ್ಧ ಮತ್ತೊಂದು ಕೇಸ್ ದಾಖಲು

Related Articles

Back to top button