ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ ನವರು ಭಾಗಿಯಾಗಿದ್ದರೆ ಅಂಥವರನ್ನು ಗಲ್ಲಿಗೇರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಟ್ ಕಾಯಿನ್ ದಂಧೆ ವಿಚಾರವಾಗಿ ಯಾರನ್ನು ಬೇಕಾದರೂ ತನಿಖೆಗೊಳಪಡಿಸಲಿ. ಕಾಂಗ್ರೆಸ್ ನ ಯಾರೇ ಇಂಥಹ ದಂಧೆಯಲ್ಲಿ ಭಾಗಿಯಾಗಿದ್ದರೆ ಅವರನ್ನು ನೇಣಿಗೆ ಹಾಕಲಿ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಬಂಧಿಸಲಿ ಎಂದು ಹೇಳಿದರು.
ನಾವು ಯಾರ ಬೆಂಬಲಕ್ಕೂ ನಿಂತಿಲ್ಲ.ಯಾರನ್ನು ಬೇಕಾದರೂ ತನಿಖೆಗೆ ಒಳಪಡಿಸಬಹುದು.ಸಂದೀಪ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿದ್ದೂ ನೆನಪಿದೆ. ಗೃಹ ಸಚಿವರು ಏನು ಮಾತನಾಡಿದ್ದಾರೆ ಎಂಬುದೂ ಗೊತ್ತಿದೆ. ನಮ್ಮ ಬಳಿಯೂ ದಾಖಲೆಗಳಿವೆ. ಹ್ಯಾಕರ್ ಶ್ರೀಕಿಯನ್ನು ಈಗ ಏಕೆ ಅರೆಸ್ಟ್ ಮಾಡಿದರು? ಆತನ ವಿರುದ್ಧ ಹೈಕೋರ್ಟ್ ನಲ್ಲಿ ಕೇಸ್ ಇದೆ. ಅದು ಏನಾಯಿತು? ಬಿಟ್ ಕಾಯಿನ್ ಪ್ರಕರಣ ಇಡಿಗೆ ಕೊಟ್ಟಿರುವುದಾಗಿ ಸರ್ಕಾರ ಹೇಳುತ್ತಿದೆ. ಅದರ ನೋಟಿಫಿಕೇಷನ್ ಏನಿದೆ ಎಂಬುದನ್ನು ಮಾಹಿತಿ ನೀಡಲಿ ಎಂದು ಹೇಳಿದರು.
ವಿಧಾನಪರಿಷತ್ ಚುನಾವಣೆಗೆ ದಿನಾಂಕ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ