Kannada NewsKarnataka News

ಬೆಳಗಾವಿಯಲ್ಲಿ ಕಾರ್ ಕಳ್ಳತನ ಮಾಡಿದ್ದ ಬಾಲಕ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಬೆಳಗಾವಿ ನೆಹರು ನಗರದಲ್ಲಿರುವ ಡಿ-ಮಾರ್ಟ್ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ ಕಾರ ಕಳ್ಳತನ ಮಾಡಿದ ಬಾಲಕನನ್ನು ಪೊಲೀಸರು ಬಂಧಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ.
 
ಎಪಿಎಂಸಿ ಪೊಲೀಸ್ ಇನಸ್ಪೆಕ್ಟರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಬಾಲಕನನ್ನು ಕೇವಲ 8 ದಿನಗಳಲ್ಲಿ ಪತ್ತೆ ಮಾಡಿ ಆತನ ವಶದಲ್ಲಿದ್ದ ಸುಮಾರು 50,000  ರೂ. ಕಿಮ್ಮತ್ತಿನ ಒಂದು ಮಾರುತಿ 800 ಕಾರ್ ವಶಪಡಿಸಿಕೊಳ್ಳಲಾಗಿದೆ.
  ಬಾಲಕನನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರ್ ಪಡಿಸಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.
 

Related Articles

Back to top button