ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಚನ್ನರಾಜ ಹಟ್ಟಿಹೊಳಿ ಮರೈನ್ ಎಂಜಿನಿಯರಿಂಗ ಪದವೀಧರ.
ಪದವಿ ನಂತರ ದೇಶ-ವಿದೇಶಗಳಲ್ಲಿ ವೃತ್ತಿ ನಿರ್ವಹಿಸಿ ನಂತರ ಸಮಾಜ ಸೇವೆ, ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಸ್ವಂತ ಊರಿಗೆ ಮರಳಿದರು.
ಸಧ್ಯ, ಸಹೋದರಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಜೊತೆಗೆ ರಾಜಕೀಯ, ಸಾಮಾಜಿಕ ಸೇವೆ ಜೊತೆಗೆ, ಸಕ್ಕರೆ ಉದ್ಯಮ, ರಿಯಲ್ ಎಸ್ಟೇಟ್, ಸಹಕಾರಿ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಲಕ್ಷ್ಮಿ ತಾಯಿ ಫೌಂಡೇಶನ್ ನಿರ್ದೇಶಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹರ್ಷ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ, ಲಕ್ಷ್ಮಿತಾಯಿ ಕೋ ಆಪರೇಟಿವ್ ಸೊಸೈಟ್ ಚೇರಮನ್ ಆಗಿ, ಹರ್ಷಾ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಚೇರಮನ್ ಆಗಿ ಕೆಲಸ ಮಾಡುತ್ತಿದ್ದಾರೆ.
ಅವರ ಪರಿಚಯ ಇಲ್ಲಿದೆ –
ಜನನ – 20-11-1984
ಜನ್ಮ ಸ್ಥಳ – ಖಾನಾಪುರ ತಾಲೂಕು ಚಿಕ್ಕಟ್ಟಿಹೊಳೆ
ಪ್ರಾಥಮಿಕ ಶಿಕ್ಷಣ – ಚಿಕ್ಕಟ್ಟಿಹೊಳೆ
ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ – ಮೈಸೂರು ರಾಮಕೃಷ್ಣ ವಿದ್ಯಾಶಾಲೆ
ಬಿಇ – ಚೆನ್ನೈ (ವಿಷಯ- ಮರೈನ್ ಎಂಜಿನಿಯರಿಂಗ್)
ಅನುಭವ – ವಿವಿಧ ದೇಶಗಳಲ್ಲಿ ಮರೈನ್ ಕೆಲಸ ನಿರ್ವಹಣೆ
ಹಾಲಿ ವಾಸ – ಬೆಳಗಾವಿ
ಹಾಲಿ ಉದ್ಯೋಗ – ಸಮಾಜ ಸೇವೆ, ಸಕ್ಕರೆ ಉದ್ಯಮ, ರಿಯಲ್ ಎಸ್ಟೇಟ್, ಸಹಕಾರಿ ಬ್ಯಾಂಕ್
ವಿಶೇಷ ಅರ್ಹತೆಗಳು:
1.ಗ್ರಾಮೀಣ ಪ್ರದೇಶ, ನಗರ ಪ್ರದೇಶ, ದೇಶ, ವಿದೇಶಗಳ ಜ್ಞಾನ.
2. ಉನ್ನತ ಶಿಕ್ಷಣ – ಎಂಜಿನಿಯರಿಂಗ್ ಪದವೀಧರ.
3. ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ರೈತರೊಂದಿಗೆ ಉತ್ತಮ ಬಾಂಧವ್ಯ.
4. ಸಹಕಾರಿ ಸಂಸ್ಥೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದ ಮೂಲಕ ಆ ಕ್ಷೇತ್ರದಲ್ಲೂ ಸಮಗ್ರ ಜ್ಞಾನ.
5. 2013ರಿಂದಲೂ ಸಮಾಜ ಸೇವೆ, ಜೊತೆಗೆ ರಾಜಕೀಯ ಕ್ಷೇತ್ರದ ಸಂಪೂರ್ಣ ಅನುಭವ.
6. ಸಹೋದರಿ ಲಕ್ಷ್ಮಿ ಹೆಬ್ಬಾಳಕರ್ ಅವರ 3 ಚುನಾವಣೆೆಗಳಲ್ಲಿ ಸಕ್ರೀಯ ಪಾತ್ರ.
7. ಲಕ್ಷ್ಮಿ ಹೆಬ್ಬಾಳಕರ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದಾಗ ಅವರ ಚುನಾವಣೆಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದ ಅನುಭವ.
8. ಸಹೋದರಿ ಲಕ್ಷ್ಮಿ ಹೆಬ್ಬಾಳಕರ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಸಂಪೂರ್ಣ ಕ್ಷೇತ್ರದ ಪರಿಚಯ, ಹಾಲಿ ಪ್ರತಿನಿಧಿಸುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತ.
9. ಸಹೋದರಿ ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಕೆಲಸಗಳಿಂದಲೇ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸಿಕೊಂಡಿದ್ದು, ಇಂತಹ ಜನಪ್ರತಿನಿಧಿಗಳಿರಬೇಕು ಎಂದು ಜನರು ಮಾತನಾಡುವಂತೆ ಮಾಡಿದ್ದಾರೆ. ಅವರ ಆದರ್ಶ, ಮಾದರಿ, ಅನುಭವ ಜೊತೆಗಿದೆ.
10. ಕ್ಷೇತ್ರದ ಎಲ್ಲ ಮಠಾಧೀಶರೊಂದಿಗೆ ಉತ್ತಮ ಬಾಂಧವ್ಯ.
11. ಲಕ್ಷ್ಮಿ ತಾಯಿ ಫೌಂಡೇಶನ್ ಮೂಲಕ ಕ್ಷೇತ್ರದ ಬಹುತೇಕ ಪ್ರದೇಶಗಳಲ್ಲಿ ಸಮಾಜ ಸೇವೆಯಲ್ಲಿ ಭಾಗಿ.
12. ಪ್ರವಾಹ, ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ದಿನದ 24 ಗಂಟೆಯೂ ಜನರೊಂದಿಗಿದ್ದು, ಅವರ ಕಷ್ಟದಲ್ಲಿ ಸಹಭಾಗಿತ್ವ.
13. ಕ್ಷೇತ್ರದ ಎಲ್ಲ ನಾಯಕರೊಂದಿಗೆ ಉತ್ತಮ ಬಾಂಧವ್ಯ.
14. ಕ್ರಿಯಾಶೀಲ ವ್ಯಕ್ತಿತ್ವದಿಂದಾಗಿ ಎಲ್ಲ ಸಮುದಾಯ, ಎಲ್ಲ ವಯೋಮಾನದವರೊಂದಿಗೆ ನಿಕಟ ಸಂಪರ್ಕ.
15. ಕ್ಷೇತ್ರದ ಬಹುತೇಕ ಶಿಕ್ಷಣ ಸಂಸ್ಥೆಗಳೊಂದಿಗೆ ಉತ್ತಮ ಸಂಪರ್ಕ.
16. 2013ರಿಂದಲೂ ಕ್ಷೇತ್ರದ ಜನರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು, ಅವರ ಸಮಸ್ಯೆಗಳನ್ನು ಪರಿಹರಿಸಿದ ಹೆಗ್ಗಳಿಕೆ.
17. 36 ವರ್ಷ ವಯಸ್ಸಿನ ಯುವಕನಾಗಿದ್ದು, ಕೆಲಸ ಮಾಡುವ ಉತ್ಸಾಹ.
18. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಕಳೆದ 7 ವರ್ಷದಿಂದ ಸಕ್ರೀಯ.
19. ಕ್ಷೇತ್ರದ ಯುವ ಪಡೆ ಜೊತೆಗಿದ್ದು, ಚುನಾವಣೆಯ ಸಂದರ್ಭದಲ್ಲಿ ಹಗಲು, ರಾತ್ರಿ ಕೆಲಸ ಮಾಡಲು ಸಿದ್ದರಿದ್ದಾರೆ.
20. ನಯ, ವಿನಯತೆ, ಸೌಜನ್ಯತೆ, ಸಂಘಟನಾ ಚತುರತ್ವ. ಹಿರಿಯರು, ಕಿರಿಯರು ಎಲ್ಲರ ಜೊತೆ ಹೊದಾಣಿಕೆ.
21. ಪಕ್ಷದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಹಲವಾರು ನಾಯಕರೊಂದಿಗೆ ಉತ್ತಮ ಬಾಂಧವ್ಯ.
22. ಕ್ಷೇತ್ರಕ್ಕೆ ಕೆಲಸ ತರುವ ಚತುರತೆ, ಕಲ್ಲನ್ನೂ ಕರಗಿಸಬಲ್ಲ ಚಾಕಚಕ್ಯತೆ.
23. ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ ಛಲ.
24. ಯಾವುದೇ ವಿವಾದವಿಲ್ಲದೆ, ಎಲ್ಲರೊಂದಿಗೆ ಉತ್ತಮ ಬಾಂಧವ್ಯ.
ಕಾಂಗ್ರೆಸ್ ನಿಂದ ಚನ್ನರಾಜ ಹಟ್ಟಿಹೊಳಿ ಫೈನಲ್: ಸಿಂಗಲ್ ಟಿಕೆಟ್ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ