Kannada NewsKarnataka NewsLatest
ಕೋಟ್ಯಂತರ ರೂ. ಮೌಲ್ಯದ ಕಳುವಿನ ವಸ್ತುಗಳನ್ನು ಮರಳಿ ವಾರಸುದಾರರಿಗೆ ತಲುಪಿಸಿದ ಬೆಳಗಾವಿ ನಗರ ಪೊಲೀಸ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿರುವ ಕಳೆದ 3 ವರ್ಷದಲ್ಲಿ ಕಳವು ಮಾಡಲಾಗಿದ್ದ ವಸ್ತುಗಳನ್ನು ವಾರಸುದಾರರಿಗೆ ಗುರುವಾರ ವಿತರಿಸಲಾಯಿತು.
ಠಾಣಾ ಮಟ್ಟದಲ್ಲಿ ಪಿಐ ಅಥವಾ ಪಿಎಸ್ಐ ನೇತೃತ್ವದ ತಂಡಗಳನ್ನು ನಿಯೋಜಿಸಿ ಎಸಿಪಿ ಮೇಲ್ವಿಚಾರಣಿ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಲವಾರು ಸ್ವತ್ತಿನ ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿತರಿಂದ ಕಳುವಿನ ಸ್ವತ್ತನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ನೊಂದ ಪಿರ್ಯಾದಿಯವರಿಗೆ ಅವರು ಕಳೆದುಕೊಂಡ ಬಂಗಾರ, ಬೆಳ್ಳಿಯ ಆಭರಣಗಳು, ಹಣ, ವಾಹನ ಇತ್ಯಾದಿಗಳನ್ನು ಮರಳಸುವ ನಿಮಿತ್ಯ “ಪ್ರಾಪರ್ಟಿ ಪರೇಡ್” ಕಾರ್ಯಕ್ರಮವನ್ನು ಪೊಲೀಸ್ ಆಯುಕ್ತರ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
2019- ರಲ್ಲಿ: ವಶಪಡಿಸಿಕೊಂಡ ಸ್ವತ್ತು- ರೂ.1,04,42,525-00
2020-21 ರಲ್ಲಿ ವಶಪಡಿಸಿಕೊಂಡ ಸ್ವತ್ತು 1,95,42,188-00
ಸಿಇಎನ್ ಅಪರಾಧ ಠಾಣೆಯಲ್ಲಿ 2020 ರಲ್ಲಿ ರೂ. 54,66,715/- ಮೌಲ್ಯದ 38,665 ಕೆಜಿ ಗಾಂಜಾ, ಆಫೀಮು ವಶ.
ಮೇಲಿನಂತೆ ಬೆಳಗಾವಿ ನಗರದ ವಿವಿಧ ಠಾಣೆಯಲ್ಲಿ ದಾಖಲಾದ ದರೋಡೆ, ಸುಲಗೆ, ರಾತ್ರಿ & ಹಗಲು ಕಳ್ಳತನ ಮನೆ ಕಳುವು, ಮೋಟರ್ ವಾಹನ ಕಳುವು ಇತ್ಯಾದಿ ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಮಾಡಿ ಕಳುವಾದ ಸತ್ತನ್ನು ವಶಕ್ಕೆ ಪಡೆದುಕೊಂಡು ನೊಂದವರಿಗೆ ಅವರ ಸ್ವತ್ತನ್ನು ಮರಳಿ ದೊರಕಿಸಿಕೊಡುವುದರೊಂದಿಗೆ ಕಾನೂನು ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಗುರುವಾರ ಸಂಜೆ ಸಂಬಂಧಿಸಿದವರಿಗೆ ಸ್ವತ್ತುಗಳನ್ನು ಮರಳಿಸಲಾಯಿತು. ಪೊಲೀಸ್ ಆಯುಕ್ತ ತ್ಯಾಗರಾಜನ್, ಡಿಸಿಪಿ ವಿಕ್ರಂ ಅಮಟೆ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ