Latest

ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೊಂದು ಗುಸು ಗುಸು ಬಾಂಬ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರಿಗೆ ಹೆದರಿ ವಲಭಬಾಯ್ ಪಟೇಲರಿಗೆ ಗೌರವ ತೋರಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ಮತ್ತೊಂದು ಗುಸು ಗುಸು ಬಾಂಬ್ ಸಿಡಿಸಿದ್ದಾರೆ ಶಾಸಕ ಎಂ.ಪಿ.ರೇಣುಕಾಚಾರ್ಯ.

ಕೆಪಿಸಿಸಿ ಕಚೇರಿಯಲ್ಲಿ ಆಗಸ್ಟ್ 31ರಂದು ನಡೆದ ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಗುಸು ಗುಸು ಸಂಭಾಷಣೆಯ ವಿಡಿಯೋ ಬಿಡುಗಡೆ ಮಾಡಿರುವ ರೇಣುಕಾಚಾರ್ಯ, ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್ ಕರ್ಮಕಥೆ ಎಂದು ಟ್ವೀಟ್ ಮಾಡಿದ್ದಾರೆ.

Home add -Advt

ಅಂದು ಇಂದಿರಾ ಗಾಂಧಿ ಪುಣ್ಯಸ್ಮರಣೆ ಮಾತ್ರ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ವಲ್ಲಭ್ ಬಾಯ್ ಪಟೇಲ್ ಫೋಟೋ ಇಡಲು ಸೂಚನೆ ನೀಡಿದ್ದರು. ಇಂದು ವಲ್ಲಭ್ ಬಾಯ್ ಪಟೇಲ್ ರ ಜನ್ಮದಿನ ಅಂತೆ ಎಂದಿದ್ದಾರೆ. ಇದಕ್ಕೆ ಡಿ.ಕೆ.ಶಿವಕುಮಾರ್ ಪಟೇಲರ ಜನ್ಮದಿನಾಚರಣೆ ನಾವು ಮಾಡುತ್ತಿಲ್ಲ ಎಂದಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಇದನ್ನೇ ಬಿಜೆಪಿಯವರು ಅಡ್ವಂಟೇಜ್ ತೆಗೆದುಕೊಂಡು ದೊಡ್ಡದು ಮಾಡುತ್ತಾರೆ ಎಂದಿದ್ದಾರೆ. ತಕ್ಷಣ ಸಿಬ್ಬಂದಿಗಳು ಪಟೇಲರ ಫೋಟೋವನ್ನು ಇಟ್ಟಿದ್ದಾರೆ. ಈ ಕುರಿತ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಟ್ವೀಟ್ ಮಾಡಿರುವ ರೇಣುಕಾಚಾರ್ಯ ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್ ಕರ್ಮಕಥೆ ಎಂದು ಲೇವಡಿ ಮಾಡಿದ್ದಾರೆ.

ಬಿಡಿಎ ಕಚೇರಿಯಲ್ಲಿ ಮುಂದುವರೆದ ಪರಿಶೀಲನೆ

Related Articles

Back to top button