
ಪ್ರಗತಿವಾಹಿನಿ ಸುದ್ದಿ; ಒಡಿಶಾ: ಡಿಜೆ ಮ್ಯೂಸಿಕ್ ಶಬ್ಧದಿಂದ ಹೃದಯಾಘಾತಕ್ಕೊಳಗಾಗಿ 63 ಕೋಳಿಗಳು ಸಾವನ್ನಪ್ಪಿರುವ ಘಟನೆ ಓಡಿಸಾದ ಬಾಲಸೂರ್ ನಲ್ಲಿ ನಡೆದಿದೆ.
ಡಿಜೆ ಮ್ಯೂಸಿಕ್ ಶಬ್ಧದಿಂದಾಗಿ 63 ಕೋಳಿಗಳು ಮೃತಪಟ್ಟಿದೆ ಎಂದು ಕೋಳಿ ಫಾರಂ ಮಾಲೀಕ ರಂಜಿತ್ ಪರಿದಾ ಎಂಬಾತ ನೆರೆಮನೆಯ ರಾಮಚಂದ್ರ ಪರಿದಾ ಎಂಬಾತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಮದುವೆ ಮೆರವಣಿಗೆಯಲ್ಲಿ ಜೋರಾಗಿ ಹಾಕಿದ್ದ ಡಿಜೆ ಮ್ಯೂಸಿಕ್ ನಿಂದ ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ ಎಂದು ಆರೋಪಿಸಲಾಗಿದೆ. ಪಶು ವೈದ್ಯರು ಕೂಡ ಅತಿಯಾದ ಶಬ್ಧದಿಂದ ಆಘಾತಗೊಂಡು ಕೋಲಿಗಳು ಸಾವನ್ನಪ್ಪಿರುವ ಬಗ್ಗೆ ತಿಳಿಸಿದ್ದಾಗಿ ಕೋಳಿ ಫಾರಂ ಮಾಲೀಕರು ತಿಳಿಸಿದ್ದಾರೆ.