Kannada NewsKarnataka News
ಬೆದರಿಕೆ, ಆಮಿಷಗಳಿಗೆ ಬಲಿಯಾಗದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ – ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ನಾಗರಮುನ್ನೋಳಿ; ರಾಯಬಾಗ ಮತಕ್ಷೇತ್ರದ ಜನರು ಮುಗ್ದರು. ಅವರು ಯಾರಿಗೂ ಹೆದರಬೇಕಾಗಿಲ್ಲ. ಅವರ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಪಕ್ಷ ಬದ್ದವಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಅವರು ಗುರುವಾರ ನಾಗರಮುನ್ನೋಳಿ ಗ್ರಾಮಕ್ಕೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರ ಪ್ರಚಾರ ಕೈಗೊಂಡು ಮಾತನಾಡಿದರು.
ಪಕ್ಷೇತರ ಅಭ್ಯರ್ಥಿಗಳ ಅಮಿಷಕ್ಕೆ ಒಳಗಾಗದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಆಯ್ಕೆ ಮಾಡಬೇಕು. ತನ್ಮೂಲಕ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಬೇಕು ಎಂದರು. ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮಾತನಾಡಿದರು. ಮಾಜಿ.ಗ್ರಾ.ಪಂ ಅಧ್ಯಕ್ಷ ಸಿದ್ದಪ್ಪಾ ಮರ‍್ಯಾಯಿ, ವಿನಾಯಕ ಕುಂಬಾರ, ವಿ.ಬಿ.ಈಟಿ, ಎಮ್.ಬಿ.ಆಲೂರೆ, ನಿಜಾಮ್ ಫೆಂಢಾರಿ, ದಾನಪ್ಪಾ ಕೊಟಬಾಗಿ, ಎಚ್.ಎಸ್.ನಸಲಾಪೂರೆ, ಶಿವಾನಂದ ಮರ‍್ಯಾಯಿ, ಲಕ್ಷ್ಮೀಸಾಗರ ಈಟಿ, ಬಸವರಾಜ ಮನಗೂಳಿ, ಶಿವಪುತ್ರ ಮನಗೂಳಿ, ರಾಜು ಕುಂಬಾರ, ಬಸವರಾಜ ಕುಂಬಾರ, ಡಾ ಎಮ್,ಬಿ,ಕುಂಬಾರ, ಅನಿಲ ಈಟಿ, ಸಿದೋಜಿರಾವ ದೇಸಾಯಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ