ಕಾಲೇಜಿನ ಶುಲ್ಕ ತುಂಬಲು ಬೆಂಬಲದ ಅಗತ್ಯವಿದೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿಯತಿ ಫೌಂಡೇಶನ್‌ನಿಂದ ಆರ್ಕಿಟೆಕ್ಚರಲ್ ವಿದ್ಯಾರ್ಥಿನಿಯೊಬ್ಬಳ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‌ಟಾಪ್ ನೀಡುವ ಮೂಲಕ ಸಹಾಯ ಮಾಡಲಾಗಿದೆ.
ವೈಷ್ಣವಿ ಬಸುರ್ತೆಕರ್ ಅವರು ಬೆಳಗಾವಿಯ ವಸಂತರಾವ್ ಪೋತದಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಡಿಪ್ಲೋಮಾ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ಅತ್ಯಂತ ಬಡತನದಿಂದ ಬಂದಿರುವ ಅವಳಿಗೆ ಲ್ಯಾಪ್ ಕೊಳ್ಳುವ ಶಕ್ತಿ ಇರಲಿಲ್ಲ. ಹಾಗಾಗಿ ನಿಯತಿ ಫೌಂಡೇಶನ್ ಚೇರಮನ್ ಡಾ ಸೋನಾಲಿ ಸರ್ನೋಬತ್ ಮತ್ತು ಡಾ ಸಮೀರ್ ಸರ್ನೋಬತ್ ಲ್ಯಾಪ್ ಟಾಪ್ ನೀಡುವ ಮೂಲಕ ನೆರವಾಗಿದ್ದಾರೆ.
ತರಗತಿಗೆ ಮೊದಲ ರ್ಯಾಂಕ್ ನಲ್ಲಿ ಉತ್ತೀರ್ಣಳಾಗುತ್ತಿರುವ ವೈಷ್ಣವಿಗೆ ಅವಳ ಅಂತಿಮ ವರ್ಷಕ್ಕೆ ವಿದ್ಯಾರ್ಥಿವೇತನದ ಅಗತ್ಯವಿದೆ. ಕಾಲೇಜಿನ ಶುಲ್ಕ ತುಂಬಲು ಬೆಂಬಲದ ಅಗತ್ಯವಿದ್ದು, ನೆರವಿಗೆ ಬರುವಂತೆ ಡಾ.ಸೋನಾಲಿ ಸರ್ನೋಬತ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಫಲಾನುಭವಿಗಳಿಗೆ ಲ್ಯಾಪ್‌ಟಾಪ್ ಹಸ್ತಾಂತರಿಸುವ ಸಂದರ್ಭದಲ್ಲಿ ಖ್ಯಾತ ತೆರಿಗೆ ಸಲಹೆಗಾರರಾದ ಸಂದೀಪ್ ಖನ್ನೂಕರ್ ಮತ್ತು ವೇದಾಂತ್ ಸಹಕಾರಿ ಸಂಘದ ಅಧ್ಯಕ್ಷರಾದ ಸುನೀಲ್ ಆಪ್ಟೆಕರ್ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ