ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಇವುಗಳಲ್ಲಿ ಈ ಬಾರಿ ಹೆಚ್ಚು ಪ್ರತಿಷ್ಠೆಯ ಕಣ ಬೆಳಗಾವಿ.
ಕಾಂಗ್ರೆಸ್, ಬಿಜೆಪಿ ಜೊತೆಗೆ ಪಕ್ಷೇತರರಾಗಿ ಲಖನ್ ಜಾರಕಿಹೊಳಿ ಕಣಕ್ಕಿಳಿದಿರುವುದರಿಂದ ಬೆಳಗಾವಿ ಚುನಾವಣೆ ಹೆಚ್ಚು ಮಹತ್ವ ಪಡೆದಿದೆ. ಈಗಾಗಲೆ ಕ್ಷೇತ್ರದಲ್ಲಿ ವಾಕ್ಸಮರ ಜೋರಾಗಿದೆ.
ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಭಾನುವಾರ ಅವರು ಹುಬ್ಬಳ್ಳಿ – ಧಾರವಾಡ ಮತ್ತು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಸಂಜೆ ಹುಬ್ಬಳ್ಳಿಗೆ ಆಗಮಿಸಿ ಅಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ರಾತ್ರಿ ಬೆಳಗಾವಿಗೆ ಆಗಮಿಸುವರು. ಸೋಮವಾರ ಬೆಳಗ್ಗೆ ಬೆಳಗಾವಿಯಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.
ನಂತರ ವಿಜಯಪುರಕ್ಕೆ ತೆರಳಿ ಅಲ್ಲಿ ಪಕ್ಷ ಮುಖಂಡರೊಂದಿಗೆ ಸಭೆ ನಡೆಸುವರು.
ಡಿ.ಕೆ.ಶಿವಕುಮಾರ ಆಗಮನದ ನಂತರ ಚುನಾವಣೆ ಕಣೆ ಯಾವ ರೀತಿ ರಂಗೇರುತ್ತದೆ ಕಾದು ನೋಡಬೇಕಿದೆ.
ಒಮಿಕ್ರಾನ್ ಭೀತಿ: ಹೊಸ ಮಾರ್ಗಸೂಚಿ: ಸಿಎಂ ನೇತೃತ್ವದ ಸಭೆ ನಿರ್ಧಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ