Latest

ಚುನಾವಣಾ ಸಾಮಾನ್ಯ ವೀಕ್ಷಕರನ್ನು ಸಂಪರ್ಕಿಸಬೇಕೆ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಲೋಕಸಭಾ ಚುನಾವಣೆ-2019ರ ಹಿನ್ನೆಲೆಯಲ್ಲಿ ಜಿಲ್ಲೆಯ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗದಿಂದ ನೇಮಿಸಲಾಗಿರುವ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ಪೋಲಿಸ್ ವೀಕ್ಷಕರು ಜಿಲ್ಲೆಗೆ ಆಗಮಿಸಿದ್ದು, ಸಾರ್ವಜನಿಕರ ಭೇಟಿಗೆ ಲಭ್ಯವಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ವಿಶಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಡಾ. ಎಂ. ಮಥಿವಣ್ಣನ್ ಹಾಗೂ ಐಎಎಸ್ ಅಧಿಕಾರಿ ಅಬು ಇಮ್ರಾನ್, ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ರಾಜೀವ ಚಂದ್ರ ದುಬೆ ಆಗಮಿಸಿದ್ದಾರೆ.

ಚುನಾವಣಾ ವೆಚ್ಚ ವೀಕ್ಷಕರ ಹೆಸರು, ಉಸ್ತುವಾರಿ ವಹಿಸಲಿರುವ ವಿಧಾನಸಭಾ ಮತಕ್ಷೇತ್ರಗಳು, ದೂರವಾಣಿ ಸಂಖ್ಯೆ, ವಾಸಸ್ಥಳ ಮತ್ತು ಸಾರ್ವಜನಿಕ ಭೇಟಿಗೆ ಲಭ್ಯವಿರುವ ಸಮಯದ ವಿವರ ಈ ಕೆಳಕಂಡಂತಿದೆ.

ಡಾ. ಎಂ. ಮಥಿವಣ್ಣನ್: 01-ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರು – 03-ಅಥಣಿ, 04-ಕಾಗವಾಡ, 05-ಕುಡಚಿ (ಎಸ್‌ಸಿ), 06-ರಾಯಬಾಗ (ಎಸ್‌ಸಿ) ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿ. ಮೊ: 8277889379

ವಸತಿ ವಿವರ: ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ಮೊದಲನೆ ಮಹಡಿ, ಕೊಠಡಿ ಸಂಖ್ಯೆ; ಎಫ್ 6 ಮತ್ತು 7

ಅಬು ಇಮ್ರಾನ್: 01-ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರು – 01-ನಿಪ್ಪಾಣಿ, 02-ಚಿಕ್ಕೋಡಿ-ಸದಲಗಾ, 07-ಹುಕ್ಕೇರಿ, 10-ಯಮಕನಮರಡಿ (ಎಸ್‌ಟಿ) ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿ. ಮೊ: 8277889380

ವಸತಿ ವಿವರ: ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ಎರಡನೇ ಮಹಡಿ  ಕೊಠಡಿ ಸಂಖ್ಯೆ; ಎಸ್ 5

ರಾಜೀವ ಚಂದ್ರ ದುಬೆ: 02-ಬೆಳಗಾವಿ ಲೋಕಸಭಾ ಕ್ಷೇತ್ರ ಚುನಾವಣಾ ಸಾಮಾನ್ಯ ವೀಕ್ಷಕರು – 08-ಅರಬಾವಿ, 09- ಗೋಕಾಕ, 11-ಬೆಳಗಾವಿ ಉತ್ತರ, 12-ಬೆಳಗಾವಿ ದಕ್ಷಿಣ, 13-ಬೆಳಗಾವಿ ಗ್ರಾಮೀಣ, 16-ಬೈಲಹೊಂಗಲ, 17-ಸವದತ್ತಿ, 18-  ರಾಮದುರ್ಗ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿ. ಮೊ: 8277889378    

ವಸತಿ ವಿವರ : ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ಎರಡನೇ ಮಹಡಿ  ಕೊಠಡಿ ಸಂಖ್ಯೆ- ಎಸ್ 6 ಮತ್ತು 7

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button