ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಪತಿ ಪತ್ನಿಯರು ಜಗಳವಾಡುವುದಕ್ಕೂ ಪದ್ಧತಿಗಳಿವೆಯೇ ?
ಇದೇ ಎನ್ನುತ್ತಾರೆ ಕೌಟುಂಬಿಕ ಸಲಹೆಗಾರರು.
ಜಗಳವಾಡುವುದೆಂದರೆ ನಿಯಮ, ಸಂಸ್ಕಾರ ಮೀರಿ ಆಕ್ರೋಶ ವ್ಯಕ್ತಪಡಿಸುವುದು ಎಂಬುದು ಸಾಮಾನ್ಯ ಕಲ್ಪನೆ, ಆದರೆ ದಾಂಪತ್ಯ ಕಲಹ ಮಿತಿ ಮೀರಿದರೆ ಸಂಬಂಧಗಳು ಮತ್ತೆ ರಿಪೇರಿಯಾಗದಷ್ಟು ಹಾಳಾಗುವ ಅಪಾಯವೂ ಇದೆ. ಈ ಹಿನ್ನೆಲೆಯಲ್ಲಿ ಪತಿ ಪತ್ನಿಯರ ಜಗಳವು ಅಂತಿಮವಾಗಿ ಧನಾತ್ಮಕ ಫಲಿತಾಂಶ ನೀಡಿದರೆ ಕುಟುಂಬಕ್ಕೆ ಒಳ್ಳೆಯದು.
ಇಂಥಹ ಅತ್ಯಾಪ್ತ, ನವ ವಿವಾಹಿತರಿಂದ ಹಿಡಿದು ವಯೋವೃದ್ಧ ದಂಪತಿಯವರೆಗೆ ಪ್ರತಿಯೊಬ್ಬರೂ ಕೇಳಲೇಬೇಕಾದ ವಿಷವೊಂದು ಇಂದು ( ಶುಕ್ರವಾರ ಡಿ. 3 ) ಸಂಜೆ ಏಳು ಗಂಟೆಗೆ ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಚರ್ಚೆಯಾಗುತ್ತಿದೆ.
*ಇದು ಕ್ಲಬ್ ಹೌಸ್ ಜಮಾನಾ*
ಸಮೂಹ ಮಾಧ್ಯಮಗಳು ಇಂದು ಅಮಿತವಾದ ಆಯಾಮಗಳಲ್ಲಿ ಬೆಳೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಕ್ಲಬ್ ಹೌಸ್ ಅತ್ಯಂತ ಜನಪ್ರಿಯವಾಗುತ್ತಿದೆ. ಮನೆಯ ಜಗುಲಿಯ ಮೇಲೆ ಎಲ್ಲರೂ ಕುಳಿತು ಹರಟೆ ಹೊಡೆಯುವ ಮಾದರಿಯಲ್ಲಿ ಕ್ಲಬ್ ಹೌಸ್ ಮುದ ನೀಡುತ್ತದೆ. ಜೊತೆಗೆ ಅತ್ಯಂತ ಕುತೂಹಲಕಾರಿ ಮತ್ತು ಮಾಹಿತಿಪೂರ್ಣ ವಿಷಯಗಳು ಜನರಿಗೆ ತಲುಪುತ್ತಿವೆ. ಅದರಲ್ಲೂ
ವಿಶ್ವವಾಣಿ ಪತ್ರಿಕೆಯ ಸಂಪಾದಕ, ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವಿಶ್ವವಾಣಿ ಕ್ಲಬ್ ಹೌಸ್ ಜಾಗತಿಕ ಮಟ್ಟದಲ್ಲಿ ಜನಪ್ರೀಯತೆ ಪಡೆದಿದೆ. 100 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿರುವ ಕನ್ನಡಿಗರು ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಭಾಗಿಯಾಗುತ್ತಾರೆ. ಸರಾಸರಿ 5 ಸಾವಿರಕ್ಕೂ ಹೆಚ್ಚು ಶ್ರೋತ್ರುಗಳು ಪ್ರತಿ ದಿನ ಪಾಲ್ಗೊಳ್ಳುತ್ತಿದ್ದು ವಿಶ್ವ ವಾಣಿ ಕ್ಲಬ್ ಹೌಸ್ ವಿಶ್ವ ದಾಖಲೆಯನ್ನೂ ಮಾಡಿದೆ.
ಇಂಥಹ ಪ್ರಸಿದ್ಧ ಕ್ಲಬ್ ಹೌಸ್ ನಲ್ಲಿ ಪ್ರತಿ ವ್ಯಕ್ತಿಗೂ ಆಪ್ತ ಮತ್ತು ಅಗತ್ಯವೆನಿಸುವ ” ಗಂಡ ಹೆಂಡತಿ ಹೇಗೆ ಜಗಳವಾಡಬೇಕು” ಎಂಬ ವಿಷಯದ ಕುರಿತು ಚರ್ಚೆಯಾಗುತ್ತಿರುವುದು ಜನರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ. ಇಂದು ಸಂಜೆ 7 ಗಂಟೆಯಿಂದ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಕೌಟುಂಬಿಕ ಸಲಹೆಗಾರ ನಾಗೇಶ್ ಅವರು ಗಂಡ ಹೆಂಡತಿ ಹೇಗೆ ಜಗಳವಾಡಬೇಕು ಎಂಬ ಕುರಿತು ಮಾತನಾಡಲಿದ್ದಾರೆ. ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಮೋಹನ್ ಕುಮಾರ ಮತ್ತು ರೂಪಾ ಗುರುರಾಜ ಸಹ ಪಾಲ್ಗೊಳ್ಳಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ