Kannada NewsKarnataka News

ಮಹಾತ್ಮರ ಚರಿತಾಮೃತ ” ಅಹಂಕಾರ ನಿರಸನದ ವಿನಮ್ರ ಅಭಿವ್ಯಕ್ತಿ -ಡಾ.ವಿ.ಎಸ್ ಮಾಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅಥಣಿಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಯವರು ರಚಿಸಿರುವ ” ಮಹಾತ್ಮರ ಚರಿತಾಮೃತ ” ಕೃತಿಯು ಅಹಂಕಾರ ನಿರಸನದ ವಿನಮ್ರ ಅಭಿವ್ಯಕ್ತಿಯಾಗಿದೆ ಎಂದು ಸಾಹಿತಿ ಚಿಂತಕ ಡಾ ವಿ ಎಸ್ ಮಾಳಿ ಹೇಳಿದರು .


ಅವರಿಂದು ನಾಗನೂರು ರುದ್ರಾಕ್ಷಿಮಠದ ಲಿಂಗೈಕ್ಯ ಡಾ ಶಿವಬಸವ ಮಹಾಸ್ವಾಮಿಗಳವರ 132 ನೇ ಜಯಂತಿ ಮಹೋತ್ಸವ ಸಮಾರಂಭದಲ್ಲಿ ಅಥಣಿಯ ಪ್ರಭುಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ ಸಂದರ್ಭದಲ್ಲಿ ಗ್ರಂಥ ಪರಿಚಯ ಮಾಡುತ್ತಿದ್ದರು ತ್ತಿದ್ದರು .ಇತ್ತೀಚಿನ ವರ್ಷಗಳಲ್ಲಿ ಸರ್ವ ಶ್ರೇಷ್ಠ ಕೃತಿ ಎಂದು ಬಣ್ಣಿಸಿದ ಅವರು ಅದೊಂದು ಕೈ ತೊಳೆದುಕೊಂಡು ಪಂಚೇಂದ್ರಿಯಗಳನ್ನು ಮಡಿ ಮಾಡಿಕೊಂಡು ಮುಟ್ಟುವ ಗ್ರಂಥವಾಗಿದೆ ಎಂದರು .
ಜಾಗತಿಕ ಆಧ್ಯಾತ್ಮ ಚಿಂತನೆಯ ಕಣಜವೆಂದು ಹೇಳಿದ ಅವರು ಜಗತ್ತಿನಾದ್ಯಂತ ಬಾಳಿ ಬೆಳಗಿದ ಪರಂಜ್ಯೋತಿ ಗಳ ಸಮ್ಮೇಳನವೇ ಈ ಕೃತಿ ಎಂದರು .ಕಾವಿ ಬಣ್ಣದ ಗದ್ಯ ಮಹಾಕಾವ್ಯವೆಂದು ಶರಣಶ್ರೇಷ್ಠೆ ರಿಂದ ಬಣ್ಣಿಸಿಕೊಂಡ ಪ್ರಪಂಚದ ಸರ್ವ ಶ್ರೇಷ್ಠ ಕೃತಿ ಇದಾಗಿದೆ ,ಮುದ್ರಣಗೊಂಡ ಅಲ್ಪಕಾಲದಲ್ಲಿ ಹತ್ತು ಸರ್ವ ಶ್ರೇಷ್ಠ ಪ್ರಶಸ್ತಿಗಳನ್ನು ಗಳಿಸಿದ ಈ ಕಾವ್ಯ ಅಪೂರ್ವವಾದ ಆಕರ ಗ್ರಂಥವಾಗಿದೆ ಎಂದರು .

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಾಹಿತಿ ಪತ್ರಕರ್ತ ಸರ್ಜು ಕಾಟ್ಕರ್ ಮಾತನಾಡಿ ಕೂರೋಣ ಹಾವಳಿಯಿಂದ ಜಗತ್ತು ನಿಶ್ಯಬ್ದವಾದ ಅಥಣೀಶ ಪ್ರಭು ಚನ್ನಬಸವ ಶ್ರೀಗಳಿಂದ ಅತ್ಯಂತ ಸರ್ವ ಶ್ರೇಷ್ಠ ಕೃತಿ ಹೊರಬಂತು .ಆರಂಭದಲ್ಲಿ ಐವತ್ತು ಮಹಾತ್ಮರ ನ್ನೊಳಗೊಂಡ ಗ್ರಂಥ ರಚನೆಯ ಆಶಯ ಹೊಂದಿದ್ದ ಪ್ರಭು ಚನ್ನಬಸವ ಶ್ರೀಗಳ ಆಶಯ ಮುಂದೆ ನೂರು – ನೂರೈವತ್ತು 200 ದಾಟಿ 2 16 ಕ್ಕೆ ಕೊನೆಯಾಯ್ತು .ಇಂತಹ ಮತ್ತು ಮಹತ್ಕೃತಿಯ ರಚನಾಕಾರರು ಪ್ರಭುಚನ್ನಬಸವ ಸ್ವಾಮೀಜಿಯವರು ಅದಕ್ಕಾಗಿ ಮುನ್ ನೂರ ಐವತ್ತು ಕ್ಕೂ ಮಿಕ್ಕಿ ಆಕರ ಗ್ರಂಥಗಳ ಅಧ್ಯಯನ ಮಾಡಿದ್ದಾರೆ ಇದು ಸುಲಭದ ಮಾತಲ್ಲ ,ಇದರೊಂದಿಗೆ ಗ್ರಂಥದಲ್ಲಿರುವ ಚಿತ್ರಗಳ ಸಂಗ್ರಹ ಕೂಡ ಅದ್ಭುತವಾಗಿದೆ ಈ ಗ್ರಂಥ ಕತ್ತಲೆ ಕಳೆಯುವ ದೀಪಗಳ ಮೆರವಣಿಗೆ ಯಾಗಿದೆ ,ಅಥಣಿ ಈ ಕೃತಿ ವಿಶ್ವವ್ಯಾಪಿಯಾದ ರಚನೆ ಇದೊಂದು ಎನ್ಸೈಕ್ಲೋಪೀಡಿಯ ಆಗಿದೆ ,ಯಾವುದೇ ಪೂರ್ವಾಗ್ರಹ ಪೀಡಿತ ಇಲ್ಲದೆ ಸಮಚಿತ್ತವಾಗಿ ರಚಿತಗೊಂಡ ಸಹಸ್ರಮಾನದ ಕೃತಿ ಇದು ಎಂದು ಅವರು ಬಣ್ಣಿಸಿದರು .
ಹುಕ್ಕೇರಿ ಹುಕ್ಕೇರಿ ಜಗತ್ಪ್ರಸಿದ್ಧವಾದರೆ ಅಥಣೀಶ ರಿಂದ ಅಥಣಿ ಜಗತ್ಪ್ರಸಿದ್ಧವಾಯಿತು ಎಂದು ಹೇಳಿದ ಸರ್ಜು ಕಾಟ್ಕರ್ ಅವರು ಗದ್ಯ ಮತ್ತು ಕಾವ್ಯ ಎರಡರಲ್ಲೂ ಪ್ರಭುತ್ವ ಪಡೆದ ಶ್ರೀಗಳಿಂದ ಮುಂಬರುವ ದಿನಗಳಲ್ಲಿ ಇನ್ನೂ ಮಹತ್ತರ ಕೃತಿಗಳು ಹೊರಬರಲಿ ಎಂದು ಆಶಿಸಿದರು .
ನಿವೃತ್ತ ಪ್ರಾಚಾರ್ಯ ಹಿರಿಯ ಸಾಹಿತಿ ಡಾ ಬಸವರಾಜ ಜಗಜಂಪಿ ಮಾತನಾಡಿ ಬಹು ಸಂಸ್ಕೃತಿಯ ಭಾರತ ದೇಶದಲ್ಲಿ ಜಾತಿ ಧರ್ಮವನ್ನು ಬದಿಗಿಟ್ಟು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಸಂತರ ಕುರಿತು ವಿ ರಚಿತಗೊಂಡ ಮಹಾತ್ಮರ ಚರಿತಾಮೃತ ವು ನಾಡಿನೆಲ್ಲೆಡೆ ಬಿಡುಗಡೆಯಾಗುತ್ತಿರುವುದು ದಿಗ್ವಿಜಯದ ಯಾತ್ರೆ ಎಂದು ಹೇಳಿದರು .
ಕ್ಷಮಾಶೀಲರೂ ಸಂವೇದನಾಶೀಲರು ಸಾಮಾನ್ಯರಲ್ಲಿ ಅಸಾಮಾನ್ಯ ಕೆಲಸವನ್ನು ಮಾಡಿದವರು ದ್ವೇಷಿಸುವವರನ್ನು ಸಹ ಪ್ರೀತಿಸುವವರೇ ದೇವಮಾನವರು ಅವರೇ ಮಹಾತ್ಮರು ಅಂಥವರ ಚರಿತ್ರೆ ಓದಿದರೆ ನಮ್ಮ ಅಹಂಕಾರ ಜರ್ರನೆ ಇಳಿದು ಹೋಗುತ್ತದೆ ಎಂದ ಅವರು ದೇಶ ಭಾಷೆ ಸೀಮೆಯನ್ನು ಮೀರಿದ ಇಡೀ ಜೀವನ ಚರಿತ್ರೆಯನ್ನು ಐದರಿಂದ 6ಪುಟಗಳಲ್ಲಿ ಹಿಡಿದಿಡುವುದು ನಿಜಕ್ಕೂ ಕಠಿಣವಾದ ಅದನ್ನು ಮಾಡಿದ ಅಥಣಿಯ ಶ್ರೀಗಳು ಸಾರಸ್ವತ ಲೋಕದ ಸಂಪತ್ತು ಎಂದು ಬಣ್ಣಿಸಿದರು ಕೃತಿ ರಚನೆ 1ಪವಾಡ ಜಗದಗಲ ಮುಗಿಲಗಲ ಇರುವ ವಿಶ್ವ ವಿಭೂತಿಗಳನ್ನು ತೆಕ್ಕೆಗೆ ತೆಗೆದುಕೊಂಡದ್ದು ಅದ್ಭುತವಲ್ಲದೇ ಬೇರೇನೂ ಅಲ್ಲ .ಜಗತ್ತಿನ ತುಂಬೆಲ್ಲ ಮನುಕುಲದ ಉದ್ಧಾರಕ್ಕಾಗಿ ಬದುಕಿದ ಮನುಕುಲ ಮಂದಾರ ರನ್ನು ಸೇರಿಸಿ ಮಾಲೆ ಮಾಡಿ ಜಗತ್ತಿಗೆ ಅರ್ಪಿಸಿದ ಅಪೂರ್ವ ಕೃತಿ ರತ್ನ ಇದಾಗಿದೆ ,ಇದೊಂದು ಅಮೂಲ್ಯ ಆಕರ ಗ್ರಂಥ ಅಪ್ಪಟ ಚರಿತಾಮೃತ ಸರಳವಾದ ಭಾಷೆಯಲ್ಲಿ ನಿರರ್ಗಳವಾಗಿ ಮೂಡಿಬಂದ ಬೃಹತ್ ಕೃತಿ ಸಾಮಾನ್ಯ ವ್ಯಕ್ತಿ ಕೂಡ ಅರ್ಥ ಮಾಡಿಕೊಳ್ಳುವಂತಹದ್ದು ಎಂದು ಬಣ್ಣಿಸಿದರು .
ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಅವರನ್ನು ಮತ್ತು ಮುರುಘಾಮಠ ಧಾರವಾಡದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅವರನ್ನು ಶ್ರೀಮಠದ ಪರವಾಗಿ ಗೌರವಿಸಲಾಯಿತು .
ಸಮಾರಂಭದಲ್ಲಿ ಶ್ರೀ ಮಠದಿಂದ ಕನ್ನಡ ನುಡಿ ಶ್ರೀ ಪ್ರಶಸ್ತಿಯನ್ನು ಬೆಳಗಾವಿಯ ಸಾಗರ್ ಬೋರಗಲ್ ಮತ್ತು ಕಣಬರಗಿಯ ಶಂಕರ ಬಾಗೇವಾಡಿ ಅವರುಗಳಿಗೆ ನೀಡಿ ಗೌರವಿಸಲಾಯಿತು .
ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿ ಡಾ ಅಲ್ಲಮಪ್ರಭು ಸ್ವಾಮೀಜಿ ಬೆಳಗಾವಿ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉಪಸ್ಥಿತರಿದ್ದರು .
ಶಾಸಕ ಮಹಾಂತೇಶ ಕೌಜಲಗಿ ,ಎಸ್ ಜಿ ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಚೇರ್ ಮನ್ ಡಾಕ್ಟರ್ ಎಫ್ ವಿ ಮಾನವಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು
ಪ್ರಭುದೇವ ಮಾತ್ರ ಮಂಡಳಿಯವರ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ ಬಿ ಹಿರೇಮಠ ಸ್ವಾಗತಿಸಿದರು .

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button