ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಒಮಿಕ್ರಾನ್ ಸೋಂಕು ಪತ್ತೆಯಾದ ಮತ್ತೋರ್ವ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಏರ್ ಪೋರ್ಟ್ ನಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ವೇಳೆ ಜರ್ಮನಿಯ ಫಾಂಕ್ ಫರ್ಟ್ ನಿಂದ ಕೆಐಎಬಿ ಗೆ ಆಗಮಿಸಿದ್ದ ಇಬ್ಬರಲ್ಲಿ ಕೊರೊನಾ ದೃಢಪಟ್ಟಿತ್ತು. ಓರ್ವ ಸೋಂಕಿತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇನ್ನೋರ್ವ ಸೋಂಕಿತ ಏರ್ ಪೋರ್ಟ್ ನಿಂದಲೇ ನಾಪತ್ತೆಯಾಗಿದ್ದಾನೆ.
ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಇದೆಯೇ ಎಂಬುದನ್ನು ತಿಳಿಯಲು ಸ್ಯಾಂಪಲ್ಸ್ ನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಗೆ ರವಾನೆ ಮಾಡಲಾಗಿದೆ. ಕೊರೊನಾ ಪಾಸಿಟಿವ್ ಎಂದು ತಿಳಿಯುತ್ತಿದ್ದಂತೆ ಇದೀಗ ಸೋಂಕಿತ ನಾಪತ್ತೆಯಾಗಿರುವುದು ಆತಂಕವನ್ನು ಹೆಚ್ಚಿಸಿದೆ.
ನಾಪತ್ತೆಯಾಗಿರುವ ಸೋಂಕಿತನಿಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ. ಬೆಂಗಳೂರಿನಲ್ಲಿ ಪತ್ತೆಯಾಗಿದ್ದ ಮೊದಲ ಒಮಿಕ್ರಾನ್ ಸೋಂಕಿತ ಆಫ್ರಿಕನ್ ಪ್ರಜೆ ಕೂಡ ಕ್ವಾರಂಟೈನ್ ಆಗಿದ್ದ ಹೋಟೆಲ್ ನಿಂದಲೇ ಪರಾರಿಯಾಗಿದ್ದು, ಹೋಟೆಲ್ ಹಾಗೂ ಸೋಂಕಿತನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ