Latest
17 ಜನರಲ್ಲಿ ಒಮಿಕ್ರಾನ್ ಪತ್ತೆ; ಮಹಾರಾಷ್ಟ್ರದಲ್ಲಿ 144 ಸೆಕ್ಷನ್ ಜಾರಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ದೇಶಾದ್ಯಂತ ಕೊರೊನಾ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು, ಮಹಾರಾಷ್ಟ್ರದಲ್ಲಿ 7 ಜನರಲ್ಲಿ ಹೊಸದಾಗಿ ಹೊಸ ತಳಿ ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ 17 ಜನರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈನಲ್ಲಿ ಇಂದು ಮತ್ತೆ ನಾಳೆ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ರ್ಯಾಲಿ, ಮೆರವಣಿಗೆ, ಸಭೆ, ಸಮಾರಂಭಗಳಿಗೆ ಬ್ರೇಕ್ ಹಾಕಲಾಗಿದೆ. ಇನ್ನು ಮುಂಬೈನಲ್ಲಿ ಸೋಂಕಿಗೆ ಒಳಗಾದ ಎಲ್ಲರೂ ಪುರುಷರಾಗಿದ್ದು, 25, 37 ಹಾಗೂ 48 ವರ್ಷದವರಾಗಿದ್ದಾರೆ.
ಕೊರೊನಾ ರೂಪಾಂತರಿ ಹೊಸ ತಳಿ ಒಮಿಕ್ರಾನ್ ಸೋಂಕು ಭಾರತ ಸೇರಿದಂತೆ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯಾಪಿಸಿದೆ.
ಬೆಳಗಾವಿಯಲ್ಲಿ ಸಿದ್ಧವಾಗಿದೆ ಪೊಲೀಸ್ ಟೌನ್ ಶಿಪ್, ಏಕೆ ಗೊತ್ತೇ?




