Latest

PSI ಸೇರಿದಂತೆ ನಾಲ್ವರು ಪೊಲೀಸರು ಎಸಿಬಿ ಬಲೆಗೆ

ಪ್ರಗತಿವಾಹಿನಿ ಸುದ್ದಿ; ಕೊಟ್ಟೂರು: ವಿಜಯನಗರ ಜಿಲ್ಲೆ ಕೊಟ್ಟೂರು ಪೋಲೀಸ್ ಠಾಣೆ ಪೊಲೀಸ್ ರು, ಡಿ 12ರಂದು ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದಿದ್ದಾರೆ. ಕೊಟ್ಟರು ಪಿಎಸ್ಐ ನಾಗಪ್ಪ, ಎಎಸೈ ಸೈಪುಲ್ಲಾ, ತಿಪ್ಪೇಸ್ವಾಮಿ, ಬಸವರಾಜ ಸೇರಿದಂತೆ ನಾಲ್ವರು ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಬಳ್ಳಾರಿ ಎಸಿಬಿ ಬಲೆಗೆ ಬಿದ್ದಿದ್ದು ಪ್ರಕರಣ ದಾಖಲಾಗಿದೆ.

ದೂರುದಾರ ತಾಪಂ ಮಾಜಿ ಅಧ್ಯಕ್ಷ ವೆಂಕಟೇಶನಾಯ್ಕ ಎಂಬುವರ ಕುಟುಂಬದವರ ಮೇಲಿರುವ ಪ್ರಕರಣವನ್ನು, ಕೈಬಿಡುವ ಸಲುವಾಗಿ ಕೊಟ್ಟೂರು ಪಿಎಸ್ಐ ಹಾಗೂ ಎಎಸೈ ಸೇರಿದಂತೆ ಪೊಲೀಸ್ ರು ಹಣ ಬೇಡಿಕೆ ಇಟ್ಟಿದ್ದರೆಂದು ದೂರಲಾಗಿದೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಹಣ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಬಲೆಗೆ ಇವರು ಸಿಕ್ಕಿಬಿದ್ದಿದ್ದಾರೆ.

ಅಕ್ರಮ..ಸಕ್ರಮ.!? ಲಂಚದ ಕೂಪ
ವಿಜಯನಗರ ಜಿಲ್ಲೆ ಕೂಡ್ಲಿಗಿ ಹಾಗೂ ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲೂಕಿನ, ಬಹುತೇಕ ಕಡೆಗಳಲ್ಲಿ ಅಕ್ರಮಗಳು ಜರುಗುತ್ತಿವೆ ಎಂದು ಕೆಲ ರಾಟರ‍ಟಗಾರರು ದೂರಿದ್ದಾರೆ. ಅಕ್ರಮ ಮರಳು ಸಾಗಾಣಿಕೆ ಹಾಗೂ ಅಕ್ರಮ ಮದ್ಯ ಸಾಗಾಣಿಕೆ, ಮಟ್ಕಾ ಅಂದರ್ ಬಾಹರ್ ಮತ್ತು ಲಾಡ್ಜ್ ಗಳಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೇ ಜರುಗುತ್ತಿವೆ. ಸಮಾಜ ಘಾತುಕ ಚಟುವಟಿಕೆಗಳು ರಾಜಾರೋಷವಾಗಿ ಜರುಗುತ್ತಿದ್ದರೂ ಪೊಲೀಸ್ ರು ಕ್ರಮ ಕೈಗೊಳ್ಳುತ್ತಿಲ್ಲ ಇದಕ್ಕೆ ಕಾರಣ ಬಹುತೇಕ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸರು ಅಕ್ರಮ ಕೋರರ ಋಣದಲ್ಲಿದ್ದಾರೆ. ತಮ್ಮ ಕಣ್ಣು ಮುಂದೆ ಹಾಡು ಹಗಲೇ ಅಕ್ರಮ ಗಳು ಜರುಗುತ್ತಿದ್ದರೂ ತಾವು ಕೈಲಾಗದವರೆಂದು ಮೌನವಾಗಿದ್ದಾರೆ. ಅದಕ್ಕೆ ಸಿಸಿ ಕ್ಯಾಮ್ಯರಾಗಳು ಹಾಗೂ ನಾಗರೀಕರೇ ಸಾಕ್ಷಿ.

ಕೂಡ್ಲಿಗಿ ಕೊಟ್ಟೂರು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ, ಅಕ್ರಮ ಮದ್ಯ ಮರಳು, ಮಟ್ಕಾ ಅಂದರ್ ಬಾಹರ್ ಅಕ್ರಮ ಚಟುವಟಿಕೆಗಳುಸಕ್ರಿಯವಾಗಿವೆ ಎಂದು ಆರೋಪಿಸಿದ್ದಾರೆ. ಇದೀಗ ನಾಲ್ವರು ಪೊಲೀಸರನ್ನು ಭ್ರಷ್ಟಾಚಾರ ನಿಗ್ರಹ ದಳ ವಶಕ್ಕೆ ಪಡೆದಿರುವುದು ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್ ಕೇಸ್ ಪತ್ತೆ…!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button