Kannada NewsKarnataka NewsLatest

ಲಖನ್, ಕವಟಗಿಮಠ ಮತಗಳ ಅಂತರ 90, ಅಸಿಂಧುವಾದ ಮತ 152!

ಬೆಳಗಾವಿ ವಿಮಾನ ನಿಲ್ದಾಣದ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳ ಬಣ್ಣದೋಕುಳಿ ಸ್ವಾಗತ.. ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಗೆಲವು ಕಾರ್ಯಕರ್ತರ ಹರ್ಷ ಇಮ್ಮಡಿಗೊಳಿಸಿತ್ತು.

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ, :- 04 ಬೆಳಗಾವಿ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಬಸವರಾಜ್ ಹೊಟ್ಟಿಹೊಳಿ ಮತ್ತು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.

ಮೊದಲ ಪ್ರಾಶಸ್ತ್ಯದ ಮತ
ಎರಡನೇ ಪ್ರಾಶಸ್ತ್ಯದ ಮತ

ಒಟ್ಟು 8846 ಮತಗಳು ಸಿಂಧು ಮತಗಳಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಬಸವರಾಜ್ ಹಟ್ಟಿಹೊಳಿ ಅವರು 3718 ಮತಗಳನ್ನು ಪಡೆದುಕೊಂಡು ಪ್ರಥಮ‌ ಪ್ರಾಶಸ್ತ್ಯ ಮತಗಳಲ್ಲೇ ವಿಜೇತರಾದರು.

ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು 2522 ಮತಗಳನ್ನು ಪಡೆದುಕೊಂಡು ವಿಜಯಿಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ತಿಳಿಸಿದ್ದಾರೆ.
ಈ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು 2432 ಮತಗಳನ್ನು ಪಡೆದುಕೊಂಡರು.
ಚಲಾವಣೆಗೊಂಡ ಒಟ್ಟು 8846 ಮತಗಳ ಪೈಕಿ 152 ಅಸಿಂಧು ಮತಗಳಿದ್ದು 8694 ಮತಗಳು ಸಿಂಧು ಮತಗಳೆಂದು ಪರಿಗಣಿಸಲಾಯಿತು.
ಮತ ಎಣಿಕಾ ಕಾರ್ಯವು ಡಿ.14ರ ಮಂಗಳವಾರ ಚಿಕ್ಕೋಡಿ ತಾಲೂಕಿನ ಆರ್.ಡಿ.ಕಾಲೇಜಿನಲ್ಲಿ ಸುಸೂತ್ರವಾಗಿ ನಡೆಯಿತು. ಒಟ್ಟು 14 ಟೇಬಲ್‍ಗಳಲ್ಲಿ ಮತ ಎಣಿಕೆ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಬೆಳಿಗ್ಗೆ 7.30 ಕ್ಕೆ ಸ್ಟ್ರಾಂಗ್ ರೂಮ್ ತೆರೆದು ಮತ ಪೆಟ್ಟಿಗೆಳನ್ನು ಮತ ಎಣಿಕಾ ಕೇಂದ್ರಕ್ಕೆ ತರಲಾಯಿತು.
ನಂತರ ಮತ ಪತ್ರಗಳನ್ನು ಖಾಲಿ ಡ್ರಮ್ ಗೆ ಹಾಕಿ ಅದನ್ನು ಮಿಶ್ರಣ ಮಾಡಲಾಯಿತು. ಮತ ಎಣಿಕೆ ಸಿಬ್ಬಂದಿಗಳಿಗೆ ನೀಡಲಾಯಿತು.
ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್, ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಎಣಿಕಾ ಸಿಬ್ಬಂದಿ, ವಿವಿಧ ಪಕ್ಷಗಳ ಏಜೆಂಟರು, ಮುಖಂಡರು, ಸಂಬಂಧಿಸಿದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button