Latest

ಪತ್ನಿ ಆತ್ಮಹತ್ಯೆ; ಕಂಗಾಲಾಗಿ ನೇಣಿಗೆ ಶರಣಾದ ಪತಿ; ಜೀವನ್ಮರಣದ ನಡುವೆ ಪುತ್ರಿ ಹೋರಾಟ

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಅಕಾಲಿಕ ಮಳೆ, ಬೆಳೆ ನಾಶ, ಸಾಲದ ಹೊರೆಯಿಂದ ಬೇಸತ್ತ ರೈತ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಎಂ ತವರು ಜಿಲ್ಲೆ ಹಾವೇರಿಯ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.

ಸಾಲ ತೀರಿಸುವ ವಿಚಾರವಾಗಿ ಕುಟುಬದಲ್ಲಿ ಮನಸ್ತಾಪ ಆರಂಭವಾಗಿದೆ. ಒಂದೆಡೆ ಸಾಲಗಾರರ ಕಾಟ, ಇನ್ನೊಂದೆಡೆ ಬೆಳೆ ನಾಶ, ಅಕಾಲಿಕ ಮಳೆ ಇದೆಲ್ಲದರಿಂದ ಬೇಸತ್ತ 50 ವರ್ಷದ ಮಹಿಳೆ ವಾಣಿಶ್ರೀ ಮಗಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಾಯಿ ಸಾವನ್ನಪ್ಪಿದ್ದರೆ ಮಗಳು ಆಸ್ಪತ್ರೆಗೆ ದಾಖಲಾಗಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾಳೆ.

ಪತ್ನಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾಗುತ್ತಿದ್ದಂತೆ ಕಂಗಾಲಾದ ಪತಿ ಶಂಕ್ರಪ್ಪ ಜಮೀನಿನಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾರೆ.
ಕಾಲುವೆಗೆ ಬಿದ್ದ ಬಸ್; 9 ಮಂದಿ ಜಲಸಮಾಧಿ

Home add -Advt

Related Articles

Back to top button