Kannada NewsKarnataka NewsLatest

ಕಾಂಗ್ರೆಸ್ ನಿಂದ ನೂತನ ಸಮಿತಿ ರಚನೆ: ಯಾಕಾಗಿ? ಯಾರ್ಯಾರಿದ್ದಾರೆ? ಇಲ್ಲಿದೆ ವಿವರ

ಉತ್ತರ ಕರ್ನಾಟಕ ಸಾರ್ವಜನಿಕ ಸಂಪರ್ಕ, ಪ್ರತಿಭಟನೆ, ಸತ್ಯಾಗ್ರಹ ಮತ್ತು ಸಾರ್ವಜನಿಕ ಆಕ್ರೋಶ ಸ್ಪಂದನ ಸಮಿತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಸಂದರ್ಭದಲ್ಲಿ ಸರಕಾರದ ವಿರುದ್ಧ ರಣಕಹಳೆ ಊದಿರುವ ಕಾಂಗ್ರೆಸ್ ಪಕ್ಷ, ಇನ್ನಷ್ಟು ಉಗ್ರ ಹೋರಾಟದ ಪ್ಲ್ಯಾನ್ ಮಾಡಿದೆ.
ಸತೀಶ್ ಜಾರಕಿಹೊಳಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ವಿಶೇಷವೆಂದರೆ, ಉತ್ತರ ಕರ್ನಾಟಕದತ್ತ ಕಾಂಗ್ರೆಸ್ ಚಿತ್ತ ಹರಿದಿರುವುದು ಇದರಲ್ಲಿ ಸ್ಪಷ್ಟವಾಗುತ್ತದೆ.
ರಾಜ್ಯ ಸರಕಾರದ ವೈಫಲ್ಯ, ಸಂವೇದನಾ ರಹಿತತೆ, ಭ್ರಷ್ಟಾಚಾರ, ರೈತಾಪಿ ವರ್ಗದ ಬಗ್ಗೆ ನಿರ್ಲಕ್ಷ್ಯ ಕಾನೂನು ಸುವ್ಯವಸ್ಥೆ ವೈಫಲ್ಯ, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಅಸಡ್ಡೆ, ಸಾಮಾಜಿಕ ನ್ಯಾಯದ ಉಪೇಕ್ಷೆ ಮುಂತಾದ ವಿಚಾರಗಳ ಕುರಿತಂತೆ ಹಲವಾರು ಜನಪರ ಸಂಘಟನೆಗಳು ಸಾಮಾನ್ಯವಾಗಿ ಯಾವಾಗಲೂ ಮತ್ತು ಬೆಳಗಾವಿ ಅಧಿವೇಶನದ ಸಮಯದಲ್ಲಿ ಸರಕಾರದ ವಿರುದ್ಧ ಧರಣಿ, ಪ್ರತಿಭಟನೆ ಮತ್ತು ಸತ್ಯಾಗ್ರಹ ಇತ್ಯಾದಿ ಹೋರಾಟದ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿರುತ್ತಾರೆ.
ಜನರ ಆಕ್ರೋಶಗಳಿಗೆ ಕಾರಣವಾಗಿರುವ ನೀತಿ ಮತ್ತು ಸರಕಾರದ ವೈಫಲ್ಯಗಳ ಬಗ್ಗೆ ನೈಜ ವಿಚಾರಗಳನ್ನು ಎತ್ತಿಕೊಂಡು ಪಕ್ಷವು ಪ್ರತಿ ಹೋರಾಟ ಮಾಡಲು ಅನುಕೂಲವಾಗುತ್ತದೆ. ಅದೇ ರೀತಿ ಜನತೆ ನಡೆಸುವ ಚಳುವಳಿ, ಪ್ರತಿಭಟನೆ, ಹಕ್ಕೊತ್ತಾಯ ಹಾಗು ಇನ್ನಿತರ ವಿಷಯಗಳಿಗೆ ಕಾರಣವಾಗಿರುವ ಅಂಶಗಳ ಕುರಿತು ಮಾಹಿತಿಯು ಪಕ್ಷಕ್ಕೆ ಅವಶ್ಯಕವಾಗಿದೆ. ಅದಕ್ಕಾಗಿ, ಅವರಿಂದ ಮನವಿ ಮತ್ತು ಅಹವಾಲುಗಳನ್ನು ಸ್ವೀಕರಿಸಿ ಎಲ್ಲಾ ವಿಚಾರಗಳ ಬಗ್ಗೆ ಪೂರ್ಣ ಮಾಹಿತಿ ಕಲೆಹಾಕಿ ಕೆಪಿಸಿಸಿ ಅಧ್ಯಕ್ಷರಿಗೆ ಮತ್ತು ವಿರೋಧ ಪಕ್ಷದ ನಾಯಕರಿಗೆ ಒದಗಿಸುವ ಸಲುವಾಗಿ ಈ ಕೆಳಕಂಡಂತೆ ಸಮಿತಿಯನ್ನು ರಚಿಸಲಾಗಿದೆ.
ಹೆಸರು ಮತ್ತು ಹುದ್ದೆ
1. ಶ್ರೀ ಸತೀಶ್ ಜಾರಕಿಹೊಳಿ, ಕಾರ್ಯಾಧ್ಯಕ್ಷರು – ಅಧ್ಯಕ್ಷರು
ದೂರವಾಣಿ ಸಂಖ್ಯೆ – 9980733345
2. ಶ್ರೀ ವೀರಕುಮಾರ್ ಪಾಟೀಲ್, ಮಾಜಿ ಸಚಿವರು-  9845492000/ 9448369200
3. ಶ್ರೀ ಡಿ.ಬಿ. ಇನಾಂದಾರ್‌, ಮಾಜಿ ಸಚಿವರು  -9845402088
4. ಶ್ರೀ ಪ್ರಸಾದ್ ಅಬ್ಬಯ್ಯ, ಶಾಸಕರು – 9620245795
5. ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಸ್ಕರ್, ಶಾಸಕರು – 9448456178,
6. ಶ್ರೀಮತಿ ಅಂಜಲಿ ನಿಂಬಾಳ್ವರ್, ಶಾಸಕರು – 7829722876
7. ಶ್ರೀ ಮಹಂತೇಶ್ ಎಸ್. ಕೌಜಲಗಿ, ಶಾಸಕರು – 9448113113
 8. ಶ್ರೀ ಗಣೇಶ್ ಹುಕ್ಕೇರಿ, ಶಾಸಕರು – 9591031999
9. ಶ್ರೀ ಫಿರೋಜ್ ಸೇರ್, ಮಾಜಿ ಶಾಸಕರು – 9845700977
10. ಶ್ರೀ ಆಸೀಫ್, ನೂರುದ್ದೀನ್ ಸೇಠ – 9844053866
11. ಶ್ರೀ ವಿನಯ್ ನವಲಗಟ್ಟಿ, – 7026338877
ಶ್ರೀ ಲಕ್ಷ್ಮಣ್‌ರಾವ್ ಚಿಂಗೈ – ಸಹ ಅಧ್ಯಕ್ಷರು – 9448128409
ಸಮಿತಿಯು ತಕ್ಷಣದಿಂದಲೇ ಕಾರ್ಯೋನ್ಮುಖವಾಗುವಂತೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೂಚಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button